ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು- ಅನಂತಕುಮಾರ್ ಹೆಗಡೆ

130

ಕಾರವಾರ:- ಒಂದು ಕಪಾಲಿಗೆ ಹೊಡೆದರೇ ಇನ್ನೊಂದು ಕಪಾಲು ತೋರಿಸುವ ಸಂತಾನ ನಮ್ಮದಲ್ಲ,ಒಂದು ಕಪಾಲು ಹೊಡೆದರೇ ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು.

ನಮ್ಮದು ವೀರ ಸಂತಾನ ಹೇಡಿಗಳ ಸಂತಾನ ಅಲ್ಲ ಎಂದು ಮತ್ತೆ ಸಿದ್ದರಾಮಯ್ಯನವರಿಗೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ತಿರುಗೇಟು ನೀಡಿದ್ದಾರೆ. ದಾಂಡೇಲಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮಮ್ಮ ತನ್ನ ಎದೆಹಾಲು ಕುಡಿಸಿ ಬೆಳಸಿದ್ದು ,ಬೇವರ್ಸಿ ಹಾಲನ್ನಲ್ಲ,ತಾಯಿ ಹಾಲು ಕುಡಿದಿದ್ದಕ್ಕೆ ಗಂಡುಭಾಷೆ ಜನ್ಮದಿಂದ ಬಂದಿದೆ.

ಇದನ್ನೂ ಓದಿ:-ಅನಂತಕುಮಾರ್ ಹೆಗಡೆ ವಿರುದ್ದ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು

ಏಕವಚನದಲ್ಲಿ ನೀವು ಮಾತನಾಡಿದ್ರೆ ನಾವು ಏಕವಚನದಲ್ಲಿ ಮಾತನಾಡುತ್ತೀವಿ. ಸಿದ್ದರಾಮಯ್ಯನವರೇ ನೀವು ಸಭ್ಯತೆ ಬಗ್ಗೆ ಕಲಿತುಕೊಳ್ಳಿ ವಿಧಾನಸಭೆಯಲ್ಲಿ ಶಾಸಕರಿಗೆ,ಪತ್ರಕರ್ತರಿಗೆ ಯಾವರೀತಿ ಏಕ ವಚನದಲ್ಲಿ ಮಾತನಾಡುತ್ತೀರಿ ನೀವು,ನಮ್ಮ ಹತ್ರ ತಾಕತ್ ಇಲ್ವಾ ನಮಗೆ ಮಾತನಾಡಲು ಬರೋದಿಲ್ವ,
ಟಿವಿಯಲ್ಲಿ ಚರ್ಚೆ ನಡಿಯುತ್ತಿದೆ,ನಡೀಲಿ..ಈಶ್ವರನಿಗೆ ರುದ್ರಾಭಿಶೇಕ ನಡೆಯುತ್ತಿದೆ ನಡೆಯಲಿ.ಸ್ವಾಭಿಮಾನ ಕ್ಕೆ ದಕ್ಕೆ ಬಂದರೇ ಸುಮ್ಮನಿರುವ ಪ್ರಶ್ನೆಯೇ ಇಲ್ಲ.
ಜೀವ ಇರೋ ತನಕ ತಲೆ ತಗ್ಗಿಸಲು ಸಾಧ್ಯ ಇಲ್ಲ.ನಾನೇನಾದ್ರು ತಲೆ ತಗ್ಗಿಸಿದ್ರೆ ನೀವು ಹಾಕಿದ ಓಟಿಗೆ ಅಪಮಾನ,ಯಾರು ಕುಣಿತಾರೋ ಕುಣಿದುಕೊಂಡು ಹೋಗಲಿ ನಾವು ತಾಂಡವ ನೃತ್ಯ ನಮ್ಮವರಿಗೂ ಬರುತ್ತೆ
ಎಂದು ಮತ್ತೆ ವಿವಾದ ಕಿಡಿ ಹೊತ್ತಿಸಿದ್ರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!