tuplev aircraft museum Uttrakannada Karwar

Karwar| ಉದ್ಘಾಟನೆ ಗೊಂಡು ಕೆಲವೇ ಗಂಟೆಯಲ್ಲಿ ಬಂದ್ ಆಯ್ತು ಟುಪಲೇವ್ ಯುದ್ದ ವಿಮಾನ ಮ್ಯೂಸಿಯಂ.

91

ಕಾರವಾರ :- 2017 ರಲ್ಲಿ ಭಾರತೀಯ ವಾಯು ಸೇನೆಯಿಂದ ನಿವೃತ್ತವಾದ ಯುದ್ದ ವಿಮಾನವನ್ನು ತಮಿಳುನಾಡಿನ ಅರಕ್ಕೋಡಮ್ ನಲ್ಲಿ ಇರುವ ರಾಜೋಲಿ ನೌಕಾನೆಲೆಯಿಂದ 2023ರ ಸೆಪ್ಟೆಂಬರ್‌ ತಿಂಗಳಲ್ಲಿ ಕಾರವಾರಕ್ಕೆ ತರಲಾಯಿತು.ಕೋಟಿಗಟ್ಟಲೇ ವೆಚ್ಚಮಾಡಿ ತಂದ ಈ ಯುದ್ಧ ವಿಮಾನವನ್ನು ಜೋಡಿಸುವಕಾರ್ಯ ಸಹ ವಿಳಂಬವಾಗಿ 8 ತಿಂಗಳ ನಂತರ ಜೋಡಣೆಯಾಗಿತ್ತು ಇದರ ಸಂಪೂರ್ಣ ಕರ್ಚನ್ನು ನೌಕಾದಳ ವಹಿಸಿತ್ತು.

53.6 ಮೀಟರ್ ಉದ್ದ ಹಾಗೂ 35 ಮೀಟರ್ ಅಗಲವಿರುವ ಯುದ್ಧ ವಿಮಾನವು ರಾಷ್ಟ್ರೀಯ ಹೆದ್ಧಾರಿ ಪಕ್ಕದ ವಾರ್ ಮ್ಯೂಸಿಯಂ ನಲ್ಲಿ ಸ್ಥಾಪಿಸಲಾಗಿದ್ದು ಇದರ ಹೊಣೆಯನ್ನು ಪ್ರವಾಸೋಧ್ಯಮ ಇಲಾಖೆ ವಹಿಸಿಕೊಂಡಿದೆ.

ಆದರೇ ಇಂದು ಸಂಪೂರ್ಣ ಕಾರ್ಯ ಮುಗಿಯುವುದರೊಳಗೆ ಪ್ರವಾಸೋಧ್ಯಮ ಇಲಾಖೆ ಕಾರವಾರದ ಶಾಸಕ ಸತೀಶ್ ಸೈಲ್ ಮೂಲಕ ಉದ್ಘಾಟನೆ ಮಾಡಿಸಿದ್ದಾರೆ.

ಇನ್ನು ಉದ್ಘಾಟನೆಗೊಂಡು ಕೆಲವೇ ತಾಸಿನಲ್ಲಿ ಯುದ್ಧ ವಿಮಾನ ಮ್ಯೂಸಿಯಂ ( tuplev aircraft museum)ವೀಕ್ಷಣೆಗೆ ಜನರಿಗೆ ಅವಕಾಶ ನೀಡುತ್ತಿಲ್ಲ. ಇದಲ್ಲದೇ ವಿಮಾನದ ಒಳಭಾಗದಲ್ಲಿ ಎಸಿ ಅಳವಡಿಕೆ ಸೇರಿದಂತೆ ಹಲವು ಕಾರ್ಯಗಳು ಆಗದ ಕಾರಣ ಉದ್ಘಾಟನೆ ಗೊಂಡ ಕೆಲವೇ ತಾಸಿನಲ್ಲಿ ಬಂದ್ ಮಾಡಲಾಗಿದೆ.

ಸದ್ಯ ಇಲ್ಲಿನ ವಿಮಾನ ಸ್ಥಾಪನೆ ಕಾರ್ಯಕ್ಕೆ ಎರಡು ಕೋಟಿ ಹಣ ಬಿಡುಗಡೆಯಾಗಿದೆ. 20 ಲಕ್ಷದಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ರೆಸ್ಟೋರೆಂಟ್ ,ಪಾರ್ಕ ಸೇರಿದಂತೆ ಮೂಲಭೂತ ವ್ಯವಸ್ಥೆ ಕಲ್ಪಿಸಲು 1.80 ಕೋಟಿ ಹಣ ಇಲಾಖೆ ಬಳಿಯೇ ಉಳಿದಿದ್ದು ಕಾಮಗಾರಿ ಸಹ ಪ್ರಾರಂಭವಾಗಿಲ್ಲ.

tuplev aircraft museum
Karwar blue print
tuplev aircraft museum blue print

ಸದ್ಯ ಸಾಂಕೇತಿಕ ಉದ್ಘಾಟನೆ ಮಾಡಲಾಗಿದೆ ,ಹೊರಗಿನಿಂದ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಮುಂದೆ ಎಲ್ಲಾ ಕಾರ್ಯ ಮುಗಿದ ನಂತರ ಮತ್ತೊಮ್ಮೆ ಉದ್ಘಾಟನೆ ಗೊಳ್ಳಲಿದೆ ಎಂಬುದು ಅಧಿಕಾರಿಗಳ ಮಾತಾಗಿದೆ.

tuplev aircraft museum
tuplev aircraft museum Karwar

ಇನ್ನು ಉದ್ಘಾಟನೆ ಗೊಂಡು ಕೆಲವೇ ಗಂಟೆಯಲ್ಲಿ ಬಂದ್ ಮಾಡಿರುವುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ,ಕೆಲಸವೇ ಪೂರ್ಣಗೊಳ್ಳದೇ ಉದ್ಘಾಟನೆ ಮಾಡುವ ಕಾರ್ಯ ಏಕೆ ಬೇಕಿತ್ತು ಎಂಬ ಪ್ರಶ್ನೆ ಜನರು ಮಾಡುತಿದ್ದು ಪ್ರವಾಸೋಧ್ಯಮ ಇಲಾಖೆಯ ತರಾತುರಿ ನಿರ್ಧಾರ ನೆಗೆಪಾಟಲಿಗೆ ಈಡಾಗಿದೆ‌.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!