ಬೆಂಬಲಿಗರು ಕಾಂಗ್ರೆಸ್ ಗೆ ಹೋಗಿ ಎಂದು ಅಭಿಪ್ರಾಯ ನೀಡಿದ್ದಾರೆ,ನಿರ್ಧಾರ ಮಾತ್ರ ನನ್ನದು-ಶಿವರಾಮ್ ಹೆಬ್ಬಾರ್!

235

ಕಾರವಾರ :-ಅಂದಿನ ಕಾಂಗ್ರೆಸ್ ಬಂಡಾಯ ಶಾಸಕರು ಮುಂಬೈ ಗೆ ಹೋಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕಚೇರಿಯಿಂದ ಕೆರೆ ಮಾಡಿದ ಕುರಿತು ಶಾಸಕ ಸೋಮಶೇಖರ್ ರವರ ಹೇಳಿಕೆಗೆ ಕುರಿತು ಶಿರಸಿಯಲ್ಲಿ (sirsi) ಯಲ್ಲಾಪುರ ಶಾಸಕ ಶಿವರಾಮ್ ಹಬ್ಬಾರ್ (mla shivaram hebbar) ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಮಾತನಾಡುವ ಕಾಲಕ್ಕೆ ಮಾತನಾಡುತ್ತೇನೆ,ಡಿಕೆ ಶಿವಕುಮಾರ್ ನನಗೆ ವಯಕ್ತಿಕವಾಗಿ ಸ್ನೇಹಿತರು, ಸೋಮಶೇಖರ್ ರವರು ಮಾತನಾಡಿರುವ ಬಗ್ಗೆ
ನನಗೆ ಯಾವುದೇ ಮಾಹಿತಿ ಇಲ್ಲ,ಎಸ್.ಟಿ ಸೋಮಶೇಖರ್ ರವರು ಈಗಲೂ ನನಗೆ ಸ್ನೇಹಿತರೇ,
ಸರ್ಕಾರದಲ್ಲಿ ಕೆಲಸ ಇದ್ದಾಗ ಸಿದ್ದರಾಮಯ್ಯನವರನ್ನ ,ಡಿಕೆ ಶಿವಕುಮಾರ್ ರವರನ್ನು ಭೇಟಿಯಾಗುತ್ತೇನೆ,ನಾನು ಕದ್ದುಮುಚ್ಚಿ ಪಕ್ಷ ಬಿಟ್ಟು ಓಡಿ ಹೋಗಲು ಆಗುವುದಿಲ್ಲ,ಕಾಲ ಬಂದಾಗ ಹೇಳುತ್ತೇನೆ, ಬೆಂಬಲಿಗರು ಕಾಂಗ್ರೆಸ್ ಗೆ ಹೋಗಿ ಎಂದು ಅಭಿಪ್ರಾಯ ನೀಡಿದ್ದಾರೆ ಅದು ಅವರ ಅಭಿಪ್ರಾಯ, ನಿರ್ಧಾರ ಮಾತ್ರ ನನ್ನದು ಎಂದ ಬಿಜೆಪಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣಕ್ಕೆ ಭಾಗಿಯಾಗದವರ ಪಟ್ಟಿಯೇ ಇದೆ.ಬಹಳ ಮಂದಿ ನಾಯಕರು ಭಾಗಿಯಾಗಿಲ್ಲ,ಭಾಗಿಯಾಗದಿರುವವರು ವಿರೋಧಿಗಳು ಎಂದು ಅರ್ಥವೇ? ನಾನು ನಿನ್ನೆಯೇ ಅಭಿನಂದಿಸಿದ್ದೇನೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!