ಕಾರವಾರ :- ಕಡಿದ ಮತ್ತಲ್ಲಿ ಅನ್ಯರ ಮನೆಯಲ್ಲಿ ಮಲಗಿದ್ದ ವರಿಸ್ಸಾ ಮೂಲದ ಮೀನುಗಾರ ಕಾರ್ಮಿಕನಿಗೆ ಪ್ರಶ್ನೆ ಮಾಡಿದ್ದಕ್ಕೆ ವೃದ್ಧನೊಬ್ಬನನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿಯಲ್ಲಿ ನಡೆದಿದೆ.
70 ವರ್ಷದ ವಿವೇಕಾನಂದ ಪುತ್ತು ಶಾನಭಾಗ ಕೊಲೆಯಾದ ದುರ್ದೈವಿಯಾಗಿದ್ದು , ಒರಿಸ್ಸಾ ಮೂಲದ ಆಕಾಶ್ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ.
ಘಟನೆ ಏನು?

ಇಂದು ಸಂಕಷ್ಟಿ ದಿನವಾಗಿದ್ದರಿಂದ ವಿವೇಕಾನಂದ ಶಾನಭಾಗ್ ಮನೆಯ ಮುಂದೆ ಇರುವ ದೇವರ ಪೂಜೆಗೆ ಅಣಿಯಾಗಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಮನೆಯ ತಾರಸಿ ಮೇಲೆ ಮಲಗಿರೋದನ್ನ ನೋಡಿದ್ದಾರೆ. ಆತನನ್ನ ಎಬ್ಬಿಸಿ ನೀನು ಯಾರು. ಏಲ್ಲಿಯವನು ಎಂದು ಪ್ರಶ್ನಿಸಿದ್ದಾರೆ. ಆತನಿಗೆ ಸರಿಯಾಗಿ ಕನ್ನಡ ಬರದೇ ಇರುವುದರಿಂದ ಮಾತನಾಡಲು ತಡಬಡಾಯಿಸಿದ್ದಾನೆ. ಇನ್ನು ಕುಡಿದ ಮತ್ತಲ್ಲೇ ಇದ್ದ ಈತನಿಗೆ ಮತ್ತೆ ವೃದ್ಧ ಪ್ರಶ್ನಿಸಿದಾಗ
ಆತ ಅಲ್ಲಿಯೇ ಇದ್ದ ರಾಡಿನಿಂದ ವಿವೇಕಾನಂದ ಅವರಿಗೆ ಹೊಡೆಯಲು ಮುಂದಾಗಿದ್ದಾರೆ.
ಶಾನಭಾಗ್ ಅವರು ಕೂಗಿಕೊಂಡಾಗ ಮನೆಯಲ್ಲಿದ್ದ ಅವರ ಪತ್ನಿ ಹಾಗೂ ಮಗಳು ಓಡಿ ಬಂದಿದ್ದಾರೆ. ಈ ವೇಳೆ ತಡೆಯಲು ಬಂದ ಶಾನಬೋಗರ ಮಗಳ ಮೇಲೆ ರಾಡಿನಿಂದ ಹೊಡೆಯಲು ಹೋದಾಗ ಮಗಳನ್ನು ತಪ್ಪಿಸಿಲು ಹೋದ ಇವರ ತಲೆಗೆ ಬಲವಾದ ಹೊಡೆತ ಬಿದ್ದು ಸ್ಥಳದಲ್ಲೇ ಕುಸಿದಿದ್ದಾರೆ.
ಆಗ ಮನೆಯವರು ಕೂಗಿಕೊಂಡಾಗ ಸುತ್ತಮುತ್ತಲಿನವರು ಓಡಿ ಬಂದಿದ್ದಾರೆ.
ಆದ್ರೆ ಆರೋಪಿ ಅಲ್ಲಿಂದ ಓಡಿ ಸಮುದ್ರಕ್ಕೆ ಜಿಗಿದಿದ್ದಾನೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿವೇಕಾನಂದ ಅವರನ್ನ ಕುಮಟಾ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ.
ಸಮುದ್ರಕ್ಕೆ ಜಿಗಿದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.