ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್ ನಲ್ಲಿ ಸಮುದ್ರಪಾಲಾಗುತಿದ್ದ ಮೂವರು ಪ್ರವಾಸಿಗರ ನ್ನು ರಕ್ಷಣೆ ಮಾಡಿದ ಘಟನೆ ನೆಡೆದಿದೆ.
ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ತಂಡ ಇಕೋ ಬೀಚ್ ನಲ್ಲಿ ಸಮುದ್ರಕ್ಕೆ ಇಳಿದಿದ್ದು ಈ ವೇಳೆ ಅಲೆಗಳ ಹೊಡೆತಕ್ಕೆ ಮುಳಗಿ ಹೋಗಿದ್ದು ತಕ್ಷಣದಲ್ಲಿ ಲೈಪ್ ಗಾರ್ಡ್ ಸಿಬ್ಬಂದಿ ವಿರೇಂದ್ರ ಅಂಬಿಗ, ಕರಾವಳಿ ಕಾವಲು ಪಡೆ ಸಿಬ್ಬಂದಿ ಹರೀಶ ಖಾರ್ವಿ ರವರು ರಕ್ಷಿಸಿದ್ದಾರೆ.
ಶೋಹಬ್ ಶೇಖ್ (18), ಹಾಸಿಬ್ ಅಹಮದ್ (24), ಸಮನ್ ಖಾನ್ (18) ರಕ್ಷಣೆಗೊಳಗಾದವರಾಗಿದ್ದಾರೆ.