BREAKING NEWS
Search

uttrakannada| ಮತದಾನಕ್ಕೆತೊಂದರೆಯಾಗುವ ಬೂತ್ ಪಟ್ಟಿ! ಜಿಲ್ಲಾಧಿಕಾರಿ ಚುನಾವಣೆ ಬಗ್ಗೆ ಹೇಳಿದ್ದೇನು?

238

ಕಾರವಾರ :-ವಿಧಾನಸಭೆ ಚುನಾವಣೆಗೆ ಇನ್ನೇನು ಘೋಷಣೆಯೊಂದೇ ಬಾಕಿ ಉಳಿದಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದು ಇಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿರವರು ಮಾಧ್ಯಮ ಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಾಧ್ಯಮ ಗೋಷ್ಟಿ ವಿಡಿಯೋ ನೋಡಿ:-

ಜಿಲ್ಲೆಯಲ್ಲಿ 11,83461 ಮತದಾರರಿದ್ದು ಇದರಲ್ಲಿ 594244 ಪುರುಷ ಹಾಗೂ 589211 ಮಹಿಳಾ ಹಾಗೂ ಆರು ಜನ ತೃತೀಯ ಲಿಂಗ ಮತದಾರರಿದ್ದಾರೆ.
80 ವರ್ಷ ಮೇಲ್ಪಟ್ಟ 27,399 ಮತದಾರರಿದ್ದರೆ,18ರಿಂದ -20 ವಯಸ್ಸಿನ 24,234 ಜನ ಮತದಾರರಿದ್ದಾರೆ. ಇನ್ನು 14,724 ಅಂಗವಿಕಲ ಮತದಾರರು ಸಹ ಇದ್ದು ಜಿಲ್ಲೆಯಾಧ್ಯಾಂತ 1435 ಮತಗಟ್ಟೆಗಳನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ‌ ಇದರಲ್ಲಿ 30 ಮತಗಟ್ಟೆಗಳು ಕೇವಲ ಮಹಿಳಾ ಸಿಬ್ಬಂದಿಗಳೇ ನೋಡಿಕೊಳ್ಳುವ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
ಇನ್ನು ಜಿಲ್ಲೆಯಲ್ಲಿ 199 ಕ್ಲಿಟಿಕಲ್ ಮತಗಟ್ಟೆಯಿದ್ದು ಇದರಲ್ಲಿ 55 ಮತಗಟ್ಟೆಗಳು ಮತದಾನ ಮಾಡಲು ತೊಂದರೆ ಕೊಡುವ ಮತಗಟ್ಟೆಗಳಿವೆ‌ ಹೀಗಾಗಿ ಚುನಾವಣೆ ಸಂದರ್ಭದಲ್ಲಿ ತೊಂದರೆ ಕೊಡುವ 132 ಜನರನ್ನು ಗುರುತಿಸಿದ್ದು ,ಮೂರು ಜನರನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಟ್ಟೆಚ್ಚರ ಚಕ್ ಪೋಸ್ಟ್ ಸ್ಥಾಪನೆ.

ಜಿಲ್ಲೆಯಲ್ಲಿ 25 ಚಕ್ ಪೋಸ್ಸ್ ಸ್ಥಾಪನೆ ಮಾಡಲಾಗಿದ್ದು ಇದರ ಜೊತೆ ರಾಜ್ಯ ಗಡಿಭಾಗದಲ್ಲಿ ಎರಡು ,ಜಿಲ್ಲೆಯ ಒಳಭಾಗದಲ್ಲಿ 14, ಜಿಲ್ಲಾ ಗಡಿಯಲ್ಲಿ 8 ಚಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!