ಏ. 29, ಮೇ5 ಕ್ಕೆ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಅಮಿತ್ ಶಾ,ಪ್ರಿಯಾಂಕ ಗಾಂಧಿ!

92

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಷ್ಟಿತ ಸ್ಪರ್ದೆ ಏರ್ಪಟ್ಟಿರುವ ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಚಾಣುಕ್ಯ ಅಮಿತ್ ಶಾ (Smith shah) ಹಾಗೂ ಕಾಂಗ್ರಸ್ ನ ವರಿಷ್ಟೆ ಪ್ರಿಯಾಂಕ ಗಾಂಧಿ(priyanka gandi vadra) ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.

ಕಾಂಗ್ರೆಸ್ ನಿಂದ ಪ್ರಿಯಾಂಕ ಗಾಂಧಿ ರವರು ಏ.29 ರಂದು ದಾಂಡೇಲಿಯಲ್ಲಿ ಸಂಜೆ 4 ಕ್ಕೆ ಪ್ರಚಾರ ಸಭೆ ನಡೆಸಲಿದ್ದು ಹಳಿಯಾಳದಲ್ಲಿ ಅಮಿತ್ ಶಾ ಮೇ.5 ರಂದು ಪ್ರಚಾರ ಸಭೆ ನಡೆಸಲಿದ್ದಾರೆ.

ಹಳಿಯಾಳದಲ್ಲಿ ತ್ರಿಕೋನ ಸ್ಪರ್ದೆ ಆರ್.ವಿ ದೇಶಪಾಂಡೆ ಕೊನೆ ಚುನಾವಣೆ, ಸುನಿಲ್ ಹೆಗಡೆ ಮತ್ತೊಮ್ಮೆ ಗೆಲುವಿನ ನಿರೀಕ್ಷೆ.

ಹಳಿಯಾಳದಲ್ಲಿ ಕಾಂಗ್ರೆಸ್,ಜೆಡಿಎಸ್ ,ಬಿಜೆಪಿ ಅಭ್ಯರ್ಥಿಗಳ ತ್ರಿಕೋನ ಸ್ಪರ್ದೆ ಏರ್ಪಟ್ಟಿದೆ. ಕ್ಷೇತ್ರದ ಜನರಲ್ಲಿ ಯಾರಿಗೆ ಮತಹಾಕಬೇಕು ಎಂಬ ಗೊಂದಲ ಮುಂದುವರೆದಿದ್ದರೇ ಅವರ ಬಿಟ್ಟು ಇವರ ಬಿಟ್ಟು ಮತ್ಯಾರು? ಎಂಬ ಪ್ರಶ್ನೆ ಏಳತೊಡಗಿದೆ.
ಕಾಂಗ್ರೆಸ್ ನಿಂದ ಆರ್.ವಿ ದೇಶಪಾಂಡೆ ಹತ್ತನೇ ಚುನಾವಣೆ ಎದುರಿಸುತಿದ್ದು ಎಂಟುಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಹೀಗಾಗಿ ಈ ಭಾರಿ ನನ್ನದು ಕೊನೆಯ ಚುನಾವಣೆ ,ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ,ನನ್ನನ್ನು ಗೆಲ್ಲಿಸಿಕೊಡಿ ಎಂದು ಮತದಾರರಲ್ಲಿ ಆರ್.ವಿ.ಡಿ ಮನವಿ ಮಾಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಸುನಿಲ್ ಹೆಗಡೆ ಒಂದುಬಾರಿ ಜೆಡಿಎಸ್ ನಿಂದ ಶಾಸಕರಾಗಿದ್ದರು. ನಂತರ ಬಿಜೆಪಿಗೆ ಹೋದ ನಂತರ ಸರಣಿ ಸೋಲನ್ನು ಕಂಡರೂ ಕುಗ್ಗದೇ ಮತ್ತೊಮ್ಮೆ ಅವಕಾಶ ಬಯಸಿದ್ದು ಹಿಂದುತ್ವದ ರೋಲ್ ಪ್ಲೇ ಮಾಡಿದ್ದು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತಿದ್ದಾರೆ. ಇನ್ನು ಜೆಡಿಎಸ್ ನ ಮಾಜಿ ಎಮ್.ಎಲ್.ಸಿ ಘೋಟ್ನೇಕರ್ ಸಹ ತಾವೇನೂ ಕಮ್ಮಿಇಲ್ಲ ಎನ್ನುವಂತೆ ಪ್ರಚಾರ ಮಾಡುತಿದ್ದು ಕಾಂಗ್ರಸ್ ನ ಆರ್.ವಿ ದೇಶಪಾಂಡೆ ಯಿಂದ ಅನ್ಯಾಯವಾಗಿದೆ,ಇಷ್ಟುದಿನ ಅವರ ಜೊತೆ ಇದ್ದಿದ್ದಕ್ಕೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತಿದ್ದಾರೆ. ಹೀಗಾಗಿ ನನ್ನ ಗೆಲುವು ಮುಖ್ಯ ,ನನ್ನನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ನೋವು ತೋಡಿಕೊಂಡು ಮತ ಪ್ರಚಾರಕ್ಕಿಳಿದಿದ್ದಾರೆ.

ಇನ್ನು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ನಂತರದಲ್ಲಿ ಕಾಂಗ್ರೆಸ್ ನ ಆರ್.ವಿ ದೇಶಪಾಂಡೆ ಹಾಗೂ ಬಿಜೆಪಿಯ ಸುನಿಲ್ ಹೆಗಡೆ ಅಬ್ಬರದ ಪ್ರಚಾರ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ‌. ಇದರ ಜೊತೆಗೆ ಕೇಂದ್ರದ ನಾಯಕರೂ ಈ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸುತಿದ್ದು ಎರಡೂ ಪಕ್ಷಗಳಿಗೆ ರಣೋತ್ಸಾಹ ಹೆಚ್ಚಾಗಿದ್ದು ಮತ್ತಷ್ಟು ಬಲ ತಂದುಕೊಡುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!