ಕಾರವಾರ:- ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಭಾಗದಲ್ಲಿ ಕಾಡಾನೆ ದಾಳಿ ಮಿತಿ ಮೀರಿದೆ.ಮಂಚಿಕೇರಿ ಭಾಗದ ಚಿಪಗೇರಿಯ ಗೋಪಾಲಕೃಷ್ಣ ಹೆಗಡೆ ಎಂಬುವವರಿಗೆ ಸೇರಿದ ಬಾಳೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು 180 ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶ ಮಾಡಿದ್ದು ಸಾವಿರಾರು ರುಪಾಯಿ ನಷ್ಟ ಮಾಡಿವೆ.ಸ್ಥಳಕ್ಕೆ ಅರಣ್ಯಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ತಿಂಗಳಿಂದ ಯಲ್ಲಾಪುರ ಭಾಗದ ಮಂಚಿಕೇರಿ ಅರಣ್ಯ ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ಆನೆಗಳ ಹಿಂಡು ಬೀಡು ಬಿಟ್ಟಿದ್ದು ಈ ಭಾಗದ ಬೊಮ್ಮನಳ್ಳಿ,ಚಿಪಗೇರಿ ಸೇರಿದಂತೆ ಸುತ್ತಮುತ್ತಲ ಅರಣ್ಯ ಹಾಗೂ ಕೃಷಿ ಭೂಮಿಯಲ್ಲಿ ಬೀಡು ಬಿಟ್ಟಿದ್ದು ಅಡಿಕೆ,ಭತ್ತ,ಬಾಳೆ ತೋಟಗಳಿಗೆ ಲಗ್ಗೆ ಇಡುತ್ತಿದೆ.

ಅರಣ್ಯ ಇಲಾಖೆ ಕ್ರಮ ಕೈಗೊಂಡು ಆನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಗ್ರಾಮಸ್ತರು ಮನವಿ ಮಾಡಿದ್ದಾರೆ.