ಶಿವಮೊಗ್ಗ :- ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತುರ್ತು ಚಿಕಿತ್ಸಾ ಕೊಠಡಿ ಹಾಗು ಐಸಿಯು ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಕಾಲ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಐಸಿಯುನಲ್ಲಿ ಅಳವಡಿಸಿದ್ದ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು, ವಾರ್ಡ್ ತುಂಬೆಲ್ಲಾ ಹೊಗೆ ಆವರಿಸಿಕೊಂಡಿತ್ತು.
ವಾರ್ಡ್ ನಲ್ಲಿದ್ದ ರೋಗಿಗಳು, ಬಾಣಂತಿಯರು, ಮಕ್ಕಳನ್ನು ಕುಟುಂಬದವರು ಹಾಗು ಆಸ್ಪತ್ರೆ ಸಿಬ್ಬಂದಿ ಹೊರಗೆ ಕರೆ ತಂದು ರಕ್ಷಿಸಿದ್ದಾರೆ.
ಸದ್ಯ ಬಾಣಂತಿಯರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಯ ಬೇರೆ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.