ಕಾರವಾರ:ದೇಶದ ಬೃಹತ್ ಯೋಜನೆಗಳಲ್ಲಿ ಒಂದಾಗಿರುವ ಸೀಬರ್ಡ್ ನೌಕಾನೆಲೆಯಲ್ಲಿ ವಿವಿಧ ಕಂಪೆನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ದುಡಿಯುವ ಕಾರ್ಮಿಕರಿಗೆ ಸೂಕ್ತ ರೀತಿಯ ವೇತನ, ಪಿ.ಎಫ್ ನೀಡದೆ ಅನ್ಯಾಯಾ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿ ಮಾಡಿದ್ದಾರೆ.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸ್ಥಳೀಯರಿಗೆ ನೌಕರಿ ನೀಡುವ ವಿಷಯದಲ್ಲಿ ಆದ್ಯತೆ ನೀಡುತ್ತಿಲ್ಲ. ತಾಲೂಕಿನ ಸೀಬರ್ಡ್, ಕೈಗಾ ಹಾಗೂ ಎನ್.ಪಿ.ಸಿ.ಐ.ಎಲ್ ನಲ್ಲೂ ಇದೇ ರೀತಿಯ ಅವ್ಯವಹಾರ ನಡೆಸಯುತ್ತಿದೆ ಎಂದು ಆರೋಪಿಸಿದರು. ಸ್ಥಳೀಯರಿಗೆ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನೂತನವಾಗಿದ ಸೀಬರ್ಡ್ ಕಾಂಟ್ರ್ಯಾಕ್ಟ್ ಡೈವರ್ಸ್ ಮತ್ತು ವರ್ಕರ್ಸ್ ಯೂನಿಯನ್ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ಸೀಬರ್ಡ್ ನಲ್ಲಿ ವಿವಿಧ ವಿಭಾಗದ ಕಾಮಗಾರಿ ನಡೆಸುತ್ತಿರುವ ಹಲವು ಕಂಪೆನಿಗಳು ಗುತ್ತಿಗೆ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ವೇತನ ಪಾವತಿ ಮಾಡುತ್ತಿಲ್ಲ. ಪಿಎಫ್ ಕಳೆದ ಸಾಕಷ್ಟು ತಿಂಗಳಿನಿಂದ ತುಂಬಿಲ್ಲ. ಇದರಿಂದ ಗುತ್ತಿಗೆ ಕಾರ್ಮಿಕರು ನಷ್ಟದ ಜೊತೆಗೆ ಕಾನೂನಾತ್ಮಕವಾಗಿ ಲಭಿಸಬೇಕಾದ ಸವಲತ್ತುಗಳ ಸಹ ಲಭಿಸುತ್ತಿಲ್ಲ. ಅಲ್ಲದೆ ಸೀಬರ್ಡ್ ನಲ್ಲಿ ನವಯುಗ್, ಎಲ್ ಆ್ಯಂಡ್ ಟಿ, (ಬಾಳಾಜಿ,) ಐಟಿಡಿಸಿ, ನಾಗಾರ್ಜುನ್, ಶಾಪುರ್ಜಿ, ಸ್ಕ್ವಾರ್ ಸೆಕ್ಯೂರಿಟಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಂಪೆನಿಗಳು ಸ್ಥಳೀಯರಿಗೆ ನೌಕರಿ ನೀಡುತ್ತಿಲ್ಲ. ಸ್ಥಳೀಯರಿಗೆ ಪ್ರಥಮ ಆಧ್ಯತೆಯಲ್ಲಿ ನೌಕರಿ ನೀಡಬೇಕು. ಇಲ್ಲಿನ ವಿವಿಧ ಕಂಪೆಗಳಲ್ಲಿ ಚಾಲಕ, ವಿವಿಧ ವಿಭಾಗದಲ್ಲಿ ಕೆಲಸ ಮಾಡುವವರು ಸ್ಥಳೀಯವಾಗಿಯೇ ಇದ್ದಾರೆ. ಆದರೆ ಇಲ್ಲಿನವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಇರುವುದು ವಿಪರ್ಯಾಸವಾಗಿದೆ ಎಂದು ಸೈಲ್ ಹೇಳಿದರು.
ಹೆಚ್ಚಿನ ನೌಕರರು ಬಿಹಾರ್, ಝಾರ್ಖಂಡ್ ಹಾಗೂ ಇನ್ನಿತರ ರಾಜ್ಯದಿಂದ ಬಂದವರೇ ಆಗಿದ್ದಾರೆ. ಸ್ಥಳೀಯರಿಗೆ ನೌಕರಿ ನೀಡಿದರೂ ಸಹ ಗುತ್ತಿಗೆದಾರ ಕಂಪನೆಯವರು ಇಲ್ಲಿನವರ ಮೇಲೆ ದೌರ್ಜನ್ಯ ಮಾಡುತ್ತಿದೆ. ತೀರಾ ಕಳಪೆ ಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ. ಸ್ಥಳೀಯರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಎಲ್ಲ ಸೌಲಭ್ಯಗಳಿಂದ ವಂಚನೆ ಮಾಡುತ್ತಿದ್ದಾರಷ್ಟೇ ಅಲ್ಲದೆ, ಗುತ್ತಿಗೆದಾರರು ಕಾರ್ಮಿಕರ ಎಂಟಿಎಂ ತಮ್ಮ ಬಳಿ ಇಟ್ಟುಕೊಂಡು ನೀಡುವ ಅಲ್ಪ ಮಟ್ಟದ ವೇತನದಿಂದಲೂ ಹಣ ಪಡೆಯುತ್ತಿದ್ದಾರೆ. ಇದು ಈ ಹಿಂದೆ ಸೀಬರ್ಡ್ ಗುತ್ತಿಗೆ ಆಧಾರದ ಮೇಲೆ ದುಡಿಯುವ ನೌಕರರ ಜೊತೆಗೆ ಆಗಿದೆ. ಇದು ಸೀಬರ್ಡ್ ಗುತ್ತಿಗೆ ಕಾರ್ಮಿಕ ಜೊತೆಗೂ ಆಗುವ ಸಾಧ್ಯತೆ ಇದ್ದು ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.
ಸೀಬರ್ಡ್ ನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ನವಯುಗ್, ಎಲ್ ಆ್ಯಂಡ್ ಟಿ, (ಬಾಳಾಜಿ,) ಐಟಿಡಿಸಿ, ನಾಗಾರ್ಜುನ್, ಶಾಪುರ್ಜಿ, ಸ್ಕ್ವಾರ್ ಸೆಕ್ಯೂರಿಟಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕಾರ್ಮಿಕರಿಗೆ ಕಾನೂನಿನ ಪ್ರಕಾರ ನೀಡಬೇಕಾದ ಪಿಎಫ್ ಲಭ್ಯವಾಗುತ್ತಿಲ್ಲ. ಈ ಬಗ್ಗೆ ವಿಚಾರಣೆ ಮಾಡಿದರು ಆಯಾ ಕಂಪೆನಿ ಎಲ್ಲಿ ರೆಜಿಸ್ಟರ್ ಆಗಿರುತ್ತೊ ಅಲ್ಲೆ ಆಗಬೇಕು. ಆ ಪ್ರಕ್ರಿಯೆ ಮುಕ್ತಾಯ ಆಗುವ ತನಕ ಸಾಕಷ್ಟು ಸಮಯ ಕಳೆದು ಹೋಗುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೈಲ್ ಒತ್ತಾಯ ಮಾಡಿದರು.
ನೌಕರರಿಗೆ ಕನಿಷ್ಠ ವೇತನವನ್ನೂ ನೀಡದೆ, ಬ್ಯಾಂಕ್ ಖಾತೆಗಳನ್ನು ತೆರೆದು ಎಟಿಎಂಗಳನ್ನು ಗುತ್ತಿಗೆ ಕಂಪನಿಗಳೇ ಇಟ್ಟುಕೊಳ್ಳುತ್ತಿದ್ದರು. ಸೀಬರ್ಡ್ ನ ಸ್ಕ್ವೇರ್ 7 ಮತ್ತು ವಿಎಸ್ಎಫ್ ಸೆಕ್ಯುರಿಟೀಸ್ ಕಂಪನಿಗಳು ಸುಮಾರು 150 ನೌಕರರ ವರ್ಷದ ಪಿಎಫ್ ಸಹ ಪಾವತಿಸಿಲ್ಲ . ನವಯುಗ, ಎಲ್ ಆ್ಯಂಡ್ ಟಿ ಬಾಲಾಜಿ, ಐಟಿಡಿಸಿ, ನಾಗಾರ್ಜುನ, ಶಾಪುರ್ಜಿ ಪಾಲನ್ ಜಿ, ಸ್ಕ್ವೇರ್ 7 ಸೆಕ್ಯುರಿಟಿ, ವಿಎಸ್ಎಫ್ ಸೆಕ್ಯುರಿಟಿ ಸಂಸ್ಥೆಗಳು ಸರಿಯಾಗಿ ನೌಕರರಿಗೆ ವೇತನ ಪಾವತಿಸುತ್ತಿಲ್ಲ ಎಂದರು.
ಸರಕಾರಕ್ಕೂ ನಷ್ಟ:
ವಿವಿಧ ಕಂಪೆನಿಗಳು ಸೀಬರ್ಡ್ ನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಗುತ್ತಿಗೆ ಕಾಮಗಾರಿ ಮಾಡುವ ಕಂಪೆನಿ ಅಡಿಯಲ್ಲಿ ಸಾವಿರಕ್ಕೂ ಅಧಿಕ ವಿವಿಧ ಭಾರೀ ವಾಹನಗಳು ಇವೆ. ಇದು ಬೇರೆ ರಾಜ್ಯದ ನೋಂದಣಿ ಹೊಂದಿದ್ದವಾಗಿದೆ. ಈ ವಾಹನಗಳು ರಾಜ್ಯಕ್ಕೆ ಬಂದಾಗ ಆರ್.ಟಿ.ಓಗೆ ಟಾಕ್ಸ್ ತುಂಬಬೇಕು. ಆದರೆ ಅದನ್ನು ತುಂಬದೆ. ಸರಕಾರದ ರಾಜಧನವೂ ಇಲ್ಲದಂತಾಗಿದೆ. ಈ ಬಗ್ಗೆ ಇಲ್ಲಿನ ಆರ್.ಟಿ.ಓ ಅಧಿಕಾರಿಗಳಿಗೆ ಹೇಳಿದರೇ ಯಾವುದೇ ಪ್ರಯೋಜನವಾಗುತ್ತಿಲ್ಲ. ಸೀಬರ್ಡ್ ಒಳಗೆ ಬಿಡುವುದಿಲ್ಲ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸತೀಶ್ ಸೈಲ್ ಆರೋಪಿಸಿದರು.
ಕಾರವಾರದಲ್ಲಿರುವ ಕೈಗಾ, ಸೀಬರ್ಡ್ ಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಗುತ್ತಿಗೆ ಕಂಪನಿಗಳಿಂದ ಬಹಳ ಸಮಸ್ಯೆಯಾಗುತ್ತಿದೆ. ಸ್ಥಳೀಯರಿಗೆ ಗುತ್ತಿಗೆದಾರರು ಆದ್ಯತೆ ನೀಡುತ್ತಿಲ್ಲ. ಇಂಥ ಅನೇಕ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಯೂನಿಯನ್ ಅನ್ನು ರಚಿಸಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದರು.
ತನ್ನ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸೀಬರ್ಡ್ ಕಾಂಟ್ರಾಕ್ಟ್ ಡ್ರೈವರ್ಸ್ ಮತ್ತು ವರ್ಕರ್ಸ್ ಯೂನಿಯನ್ ಗೆ ಉಪಾಧ್ಯಕ್ಷರಾಗಿ ಗಿರೀಶ್ ಆಗೇರ್, ಪ್ರಸನ್ನ ಹುಲಸ್ವಾರ್, ವಿಶಾಲ್ ಕಲ್ಗುಟ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಶೇಖ್, ಕಾರ್ಯದರ್ಶಿಯಾಗಿ ಅಮೃತ್ ರೇವಣಕರ್, ಖಜಾಂಚಿಯಾಗಿ ಗಜಾನನ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೆ. ಶಂಭು ಶೆಟ್ಟಿ ಹಾಗೂ ಇನ್ನಿತರರು ಇದ್ದರು.