ಶಿರಸಿ-ಕಾಲೇಜು ವಿದ್ಯಾರ್ಥಿಗಳ ಬ್ಯಾಗ್ ತೆರೆದು ನೋಡಿದ ಪ್ರಾಚಾರ್ಯರಿಗೆ ಶಾಕ್! ವಿದ್ಯಾರ್ಥಿಗಳಿಂದ 400ಮೊಬೈಲ್ ,ಗುಟ್ಕಾ ಸಿಗರೇಟ್ ಪ್ಯಾಕ್ ವಶಕ್ಕೆ!

3527

ಶಿರಸಿ :-ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವೆಂಕಟರಾವ್ ನೀಲೇಕಣಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ 400 ಕ್ಕೂ ಹೆಚ್ಚು ಮೊಬೈಲ್ ಗಳನ್ನು ಕಾಲೇಜಿನ ಪ್ರಾಚಾರ್ಯರು ವಶಕ್ಕೆ ಪಡೆದರು. ಈ ವೇಳೆ ವಿದ್ಯಾರ್ಥಿಗಳ ಬ್ಯಾಗಿನಲ್ಲಿ ಸಿಗರೇಟು,ಗುಟ್ಕ ಸಿಕ್ಕಿದ್ದು ಶಿಕ್ಷರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಕಾಲೇಜಿಗೆ ಮೊಬೈಲ್ ತರದಂತೆ ಈ ಹಿಂದಿನಿಂದಲೂ ಎಚ್ಚರಿಕೆ ನೀಡಲಾಗಿತ್ತು. ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳು ಮೊಬೈಲ್ ತರುತ್ತಿರುವುದನ್ನು ಗಮನಿಸಿದ ಪ್ರಾಚಾರ್ಯ ನರೇಂದ್ರ ನಾಯಕ್
ಇಂದು ದಿಢೀರ್ ಕಾರ್ಯಾಚರಣೆ ನಡೆಸಿ ಮೊಬೈಲ್ ವಶಕ್ಕೆ ಪಡೆದರು. ಕೆಲ ವಿದ್ಯಾರ್ಥಿಗಳ ಬ್ಯಾಗ್‍ನಲ್ಲಿ ಸಿಗರೇಟ್ ಪೊಟ್ಟಣಗಳು ಲಭಿಸಿದ್ದು ಅಚ್ಚರಿ ಜತೆಗೆ ಆತಂಕ ಮೂಡಿಸಿತು.

ವಿದ್ಯಾರ್ಥಿಗಳಿಗೆ ಸದ್ಯ ಅರ್ಧ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಕೊಠಡಿಯ ಹೊರಗೆ ಬ್ಯಾಗುಗಳನ್ನು ಇರಿಸಿದ್ದರು. ಈ ವೇಳೆ ಸಿಬ್ಬಂದಿ ಸಹಕಾರದೊಂದಿಗೆ ತಪಾಸಣೆ ನಡೆಸಿ ಅದರಲ್ಲಿದ್ದ ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದೇವೆ ,ಕಾಲೇಜಿನಲ್ಲಿ ಮೊಬೈಲ್ ಬಳಸದಂತೆ ಪದೇ ಪದೇ ಎಚ್ಚರಿಕೆ ನೀಡಲಾಗಿದೆ. ಮಾದಕ ವ್ಯಸನದ ವಿರುದ್ಧವೂ ಜಾಗೃತಿ ಮೂಡಿಸುತ್ತಿದ್ದೇವೆ. ಇದನ್ನು ಮೀರಿ ವಿದ್ಯಾರ್ಥಿಗಳು ವರ್ತಿಸಿದ್ದಕ್ಕೆ ಶಿಸ್ತು ಕ್ರಮ ಜರುಗಿಸಿದ್ದೇವೆ ಎಂದು ಕಾಲೇಜಿನ ಪ್ರಾಚಾರ್ಯ ನರೇಂದ್ರ ನಾಯಕ್ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!