ಹೊಸವರ್ಷದ ಸಂಭ್ರಮಕ್ಕೆ ಗೋವಾ ಮದ್ಯ ಕರ್ನಾಟಕದತ್ತ-ಒಂದು ಕೋಟಿಗೂ ಹೆಚ್ಚು ಮೌಲ್ಯದ ಗೋವಾ ಮದ್ಯ ಅಬಕಾರಿ ವಶಕ್ಕೆ

157

ಕಾರವಾರ:- ಹೊಸ ವರ್ಷದ ಸಂಭ್ರಮಾಚರಣೆ ಬಂತು (ಹೊಸ ವರ್ಷದ ಸಂಭ್ರಮ 2023)ಎಂದರೆ ಸಾಕು ಮದ್ಯಪ್ರಿಯರಿಗೆ ಅದೇನೋ ಸಂಭ್ರಮ. ಹೀಗಾಗಿ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಗೋವಾ (goa) ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಅಕ್ರಮ ಮದ್ಯ ಸಾಗಾಟದಾರರು ಗೋವಾ ಮೂಲಕ ಅಕ್ರಮವಾಗಿ ಕರ್ನಾಟಕದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡಿ ಕೋಟಿ ಕೋಟಿ ಹಣ ನೀಡುತ್ತಾರೆ.

ಆದ್ರೆ ಇದೀಗ ಹೊಸ ವರ್ಷದ ಸಂಭ್ರಮಕ್ಕಾಗಿ ಬೆಂಗಳೂರು ಹಾಗೂ ಹೊನ್ನಾವರ ಭಾಗಕ್ಕೆ ದಾಖಲೆ ರಹಿತವಾಗಿ ಸಾಗಾಟ ಮಾಡುತಿದ್ದ ಗೋವಾ ಮದ್ಯವನ್ನು ಗೋವಾ-ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಕಾರವಾರದ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಎರಡು ಪ್ರತ್ತೇಕ ಪ್ರಕರಣದಲ್ಲಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ.

ಮೊದಲ ಪ್ರಕರಣದಲ್ಲಿ ಹೊನ್ನಾವರ ಮೂಲದ ಮೂರು ಜನ ರನ್ನು ಬಂಧಿಸಿದ್ದು ಈ ಪ್ರಕರಣದಲ್ಲಿ ಮದ್ಯ ಸಾಗಾಟಕ್ಕೆ ಬಳಸಿದ ಮಹೇಂದ್ರ ಕಾರ್ ಹಾಗೂ 30.25 ಲೀಟರ್ ವಿವಿಧ ಬ್ರಾಂಡ್ ನ ಮದ್ಯ ವಶಪಡಿಸಿಕೊಂಡು ಒಟ್ಟು ಮೌಲ್ಯ 12 ಲಕ್ಷ ದ ಮದ್ಯ ಹಾಗೂ ಸ್ವತ್ತನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಗಳಾದ ಹೊನ್ನಾವರದ ಕೃಷ್ಣ, ಗಣೇಶ್ ಮೇಸ್ತಾ,ಕೀರ್ತಿ ಗಜಾನನ ನಾಯ್ಕ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ .

ಈ ಸಕ್ರಮ ಮದ್ಯದೊಂದಿಗೆ ಅಕ್ರಮ ಮದ್ಯ ಸಾಗಾಟ ಮಾಡಿದ ಪ್ರಕರಣದಲ್ಲಿ ಬರೋಬ್ಬರಿ 1 ಕೋಟಿ ಮೌಲ್ಯದ ಗೋವಾ, ಕರ್ನಾಟಕ ಮದ್ಯ ವಶಕ್ಕೆ ಪಡೆದು 400 ಬಾಕ್ಸ್ 1.17 ಕೋಟಿ ಮೌಲ್ಯದ 4,800 ಬಾಟಲ್ ಕರ್ನಾಟಕ ಮದ್ಯ, 9 ಬಾಕ್ಸ್ ನಲ್ಲಿ 29 ಸಾವಿರ ಮೌಲ್ಯದ 108 ಬಾಟಲ್ ಗೋ ಮದ್ಯ ,ಒಟ್ಟು ₹1,17,85,944 ಲೀಟರ್ ಮೌಲ್ಯದ 3681 ರೂ. ಪಡೆದು ಮದ್ಯ ಸಾಗಾಟಕ್ಕೆ ಬಳಸಿದ್ದ 19.50 ಲಕ್ಷ ಮೌಲ್ಯದ ವಾಹನ ಸೇರಿ ಒಟ್ಟು 1.37 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದು ಬೆಂಗಳೂರು ಮೂಲದ ಲಾರಿ ಚಾಲಕ ನರಸಿಂಹರಾಜು ಎಲ್.ಡಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಕಾರವಾರ ಅಬಕಾರಿ ಠಾಣಾ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಬೆಂಗಳೂರಿನ ಕೆಎಸ್‌ಬಿಸಿಎಲ್‌ಗೆ ಪೂರೈಕೆಯಾಗುತ್ತಿದ್ದ ಸಕ್ರಮ ಮದ್ಯದ ಜೊತೆ ಗೋವಾ ಅಕ್ರಮ ಸಾಗಾಟ ಮಾಡಲಾಗುತಿತ್ತು.ತಪಾಸಣೆ ವೇಳೆ ಸಕ್ರಮ ಮದ್ಯದೊಂದಿಗೆ ಅಕ್ರಮ ಗೋವಾ ಮದ್ಯ ಪತ್ತೆಯಾದ ಕಾರಣ ಅಬಕಾರಿ ಉಪ ಆಯುಕ್ತೆ ವನಜಾಕ್ಷಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!