ಕಾರವಾರ:- ಕರ್ನಾಟಕ ಪ್ರವೇಶಕ್ಕೆ ಗೋವಾ ಜನರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ ಗೊಳಿಸಿರುವುದನ್ನು ಖಂಡಿಸಿ ಗೊವಾ ರಾಜ್ಯದ ಪೊಲೇಲಮ್ ಸ್ಥಳೀಯ ಜನರು ಗೊವಾ -ಕರ್ನಾಟಕ ಗಡಿಭಾಗದ ಮಾಜಾಳಿ ಚಕ್ ಪೋಸ್ಟ್ ಬಳಿ ಗೊವಾಕ್ಕೆ ತೆರಳುತಿದ್ದ ಕರ್ನಾಟಕ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗೋವಾ ರಾಜ್ಯಕ್ಕೆ ಕರ್ನಾಟಕದವರಿಗೆ ಮುಕ್ತ ಪ್ರವೇಶ ನೀಡಿದೆ.ಆದರೇ ಕರ್ನಾಟಕ ಸರ್ಕಾರ ಗೋವಾ ಜನರಿಗೆ ಕರ್ನಾಟಕ ಪ್ರವೇಶಿಸಲು ಮಾತ್ರ ಆರ್.ಟಿ.ಪಿ.ಸಿ.ಆರ್ ಕಡ್ಡಾಯ ಗೊಳಿಸಿದೆ.ಇದರಿಂದ ದಿನನಿತ್ಯ ಕಾರವಾರ ಭಾಗಕ್ಕೆ ಕೆಲಸಕ್ಕೆ ಬರುವ ಜನರಿಗೆ ತೊಂದರೆ ಯಾಗಿದೆ ಎಂದು ಗೋವಾ ರಾಜ್ಯದ ಪೊಲೇಲಮ್ ಸ್ಥಳೀಯ ಜನರು ಅಕ್ರೋಶ ವ್ಯಕ್ತಪಡಿಸಿದರು. ಗಡಿಯಲ್ಲಿ ದಿಡೀರ್ ಪ್ರತಿಭಟನೆ ಮಾಡಿದ್ದರಿಂದ ಕೆಲವು ಕಾಲ ಗೋವಾ ,ಕರ್ನಾಟಕ ಭಾಗಕ್ಕೆ ತೆರಳುವ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.