


ಕಾರವಾರ :- ಸಮುದ್ರದಲ್ಲಿ ಈಜಾಡಲು ತೆರಳಿದ ಯುವಕ ಸಮುದ್ರದ ಅಲೆಗೆ ಸಿಲುಕಿ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯಬೀಚ್‌ನಲ್ಲಿ ಇಂದು ನಡೆದಿದೆ.
ತುಮಕೂರಿನ ರಂಗನಾಥ್ ರಂಗಸಾಮಯ್ಯ (19) ಮೃತಗೊಂಡ ಯುವಕ.ತುಮಕೂರಿನ ಶೋರೂಂ ಒಂದರಲ್ಲಿ
ಕೆಲಸ ಮಾಡುತ್ತಿದ್ದ 10 ಮಂದಿ ಯುವಕರು ಎರಡು ಕಾರಿನಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದ್ರು,
ಮುರ್ಡೇಶ್ವರ ದೇವಸ್ಥಾನ, ಬೀಚ್‌ಗೆ ಭೇಟಿ ನೀಡಿದ ಬಳಿಕ ಗೋಕರ್ಣಕ್ಕೆ ಭೇಟಿ ನೀಡಿದ ಯುವಕರು ಗೋಕರ್ಣದ ಸಮುದ್ರಕ್ಕೆ ಈಜಾಡಲು ತೆರಳಿದ್ದ ವೇಳೆ ನಾಲ್ವರು ಯುವಕರು ಕೊಚ್ಚಿ ಹೋಗಿದ್ರು.

ಯುವಕರು ಸಮುದ್ರದಲ್ಲಿ ಮುಳುಗುತ್ತಿರುವ ಹಾಗೂ ರಕ್ಷಣಾ ಕಾರ್ಯದ ದೃಶ್ಯ ಲಭ್ಯವಾಗಿದ್ದು ಕೂಡಲೇ ನಾಲ್ವರನ್ನು ದಡಕ್ಕೆಳೆದ ಬೋಟಿಂಗ್ ಸಿಬ್ಬಂದಿ ಶೇಖರ್ ಹರಿಕಾಂತ್, ನಿತ್ಯಾನಂದ ಹರಿಕಾಂತ್ ಸಾವಿನಿಂದ ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ದುರದೃಷ್ಟವಶಾತ್ ತೀವ್ರ ಅಸ್ವಸ್ಥಗೊಂಡಿದ್ದ ರಂಗನಾಥ್ ರಂಗಸಾಮಯ್ಯ (21) ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.
ಇನ್ನು ರಂಗನಾಥ್ ಸಾವಿಗೀಡಾದ ವಿಷಯ ಕೇಳಿ ಉಳಿದವರು ಇನ್ನೊಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ರು,ಆದರೆ, ಪರಾರಿಯಾಗಲೆತ್ನಿಸಿದ ಯುವಕರ ಕಾರನ್ನು ಹಿರೇಗುತ್ತಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನರ ಆಕ್ರೋಶ.
ಸದ್ಯ ಈ ಭಾಗದಲ್ಲಿ ಲೈಪ್ ಗಾರ್ಡಗಳು ಕಾರ್ಯ ನಿರ್ವಹಿಸುತಿಲ್ಲ. ಹೀಗಾಗಿ ಸಮುದ್ರಕ್ಕೆ ಇಳಿದ ಹಲವು ಪ್ರವಾಸಿಗರ ಪ್ರಾಣ ಹೋಗುವಂತಾಗಿದ್ದು ಜಿಲ್ಲಾಡಳಿತ ಇತ್ತ ಗಮನಿಸಿ ಶೀಘ್ರ ಲೈಪ್ ಗಾರ್ಡಗಳನ್ನು ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.