ಗೋಕರ್ಣದಲ್ಲಿ ವಿದ್ಯುಕ್ತವಾಗಿ ನೆರವೇರಿದ ಶಿವಗಂಗಾ ವಿವಾಹ ಮಹೋತ್ಸವ.

971

ಕಾರವಾರ:-ಕಡಲತೀರದುದ್ದಕ್ಕೂ ತಳಿರು ತುಂಬಿದ ಮಾವಿನ ತೋರಣ,ಗಮಟೆ,ಪಾಂಗ್ ಗಳ ಸದ್ದು,ಹಾಲಕ್ಕಿ ಜನಾಂಗದ ಜನಪದ ಹಾಡುಗಳ ನಡುವೆ ವೈದಿಕರ ಮಂತ್ರಘೋಷ. ಶೃಂಗಾರಗೊಂಡ ಗಂಗಾಮಾತೆ ಮೆರವಣಿಗೆಯಲ್ಲಿ ಸಾಗಿ ಶಿವನನ್ನು ವರಿಸಿದಳು.ಹೌದು ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ವಿವಾಹವು ಕೋವಿಡ್ ನಡುವೆಯೂ ವಿಜ್ರಂಬಣೆಯಿಂದ ಸಾಂಗವಾಗಿ ನೆರವೇರಿತು.

ಕೋವಿಡ್ -19 ಪರಿಣಾಮ ಅಂತ್ಯತ ಸರಳವಾಗಿದ್ದರು, ಸಾಂಪ್ರದಾಯಕತೆ ಸೊಗಡು ಜಾನಪದೀಯ ಮೆರಗಿನೊಂದಿಗೆ ನಡೆದಿದ್ದು, ವಿಶೇಷವಾಗಿತ್ತು.

ಗಂಗಾಷ್ಟಮಿಯ ಮುಂಜಾವಿನಲ್ಲಿ ವಿವಾಹ ನಿಶ್ಚಯವಾದಂತೆ ಇಲ್ಲಿನ ಗೋಕರ್ಣ -ಗಂಗಾವಳಿ ನಡುವಿನ ಕಡಲ ತೀರದಲ್ಲಿ ಸೂರ್ಯ ಪಶ್ಚಿಮಮುಖವಾಗಿ ತೆರಳುವ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ಮಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು. ಕಡಲಿನ ಅಬ್ಬರ , ವಾದ್ಯಘೋಷ , ವೇದಘೋಷ ವಿಶಿಷ್ಟ ತೋರಣ, ಜಾನಪದ ಹಾಡು ಉತ್ಸವದ ಮೆರಗನ್ನು ನೀಡಿದವು.

ವಿವಾಹದ ನಂತರ ಉತ್ಸವವು ಭಕ್ತರು ಆರತಿ ನೀಡಿ ದೇವ ದಂಪತಿಗಳನ್ನು ಬರಮಾಡಿಕೊಂಡರು. ಇಲ್ಲಿನ ಅಮೃತಾನ್ನ ಭೋಜನ ಶಾಲೆಗೆ ಚಿತ್ತ್ಯೆಸಿದ ಉತ್ಸವ ಸುಂದರವಾಗಿ ಶೃಂಗಾರಗೊಂಡ ಮಂಟಪದಲ್ಲಿ ರಾಜೋಪಚಾರ ಪೂಜೆ ಸ್ವೀಕರಿಸಿ ದೇವಾಲಯಕ್ಕೆ ಆಗಮಿಸಿತು. ಅಮೃತಾನ್ನ ವಿಭಾಗದಲ್ಲಿ ಪ್ರಸಾದ ವಿತರಣೆ ನಡೆಯಿತು. ಊರ ನಾಗರಿಕರು. ಉಪಾಧಿವಂತ ಮಂಡಳಿ ಸದಸ್ಯರುಸೆರಿದಂತೆ ಎಲ್ಲಾ ಸಮಾಜದ ಭಕ್ತಸಮೂಹ ಉಪಸ್ಥಿತರಿದ್ದರು.

ವಿವಾಹ ಕಾರ್ಯದಲ್ಲಿ ಮಾವಿನ ತೋರಣದ ಎಲೆಗೆ ಸ್ಪರ್ದೇ.

ದೇವ ವಿವಾಹಕ್ಕೆ ನಿರ್ಮಿಸಿದ ವಿಶಿಷ್ಟಿ ಮಾವಿನ ತೋರಣದ ಎಲೆಯನ್ನು ಪಡೆಯಲು ಸ್ಪರ್ಧೆಯೇ ನಡೆಯುತ್ತದೆ. ಮಾವಿನ ಎಲೆಯನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಧನ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದ್ದು, ಇದರಂತೆ ತೋರಣದ ಎಲೆ ಪಡೆಯಲು ಪೈಪೋಟಿ ನಡೆದು ಕ್ಷಣಾರ್ಧದಲ್ಲಿ ತೊರಣವೇ ತೆಗೆಯಲ್ಪಡುತ್ತದೆ. ಇನ್ನೂ ವ್ಯಾಪರಸ್ಥರು , ತಮ್ಮ ಹಣದ ಗಲ್ಲಿಯಲಿ ಇದನ್ನು ಇಟ್ಟು ಪೂಜಿಸುವುದು ವಿಶೇಷವಾಗಿದೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹೃರಾಣವಾಗುತ್ತಾರೆ. ಇಲ್ಲಿ ಈ ಹಿಂದೆ ಅಹಿತಕರ ಘಟನೆ ನಡೆದ ಕಾರಣ ಅಂದಿನಿಂದ ಇಂದಿನ ವರೆಗೂ 144 ಕಲಂ ಜಾರಿ ಮಾದರಿಯಲ್ಲೆ ಗುರುತು ಹಾಕಿ ಬೇಲೆ ನಿರ್ಮಿಸಿ ನೂಕು ನೂಗ್ಗಲು ಉಂಟಾಗದಂತೆ ತಡೆಯುತ್ತಾರೆ.ಹೀಗಾಗಿ ಈಬಾರಿ ಹೆಚ್ವು ನೂಕು ನುಗ್ಗಲು ಆಗದಂತೆ ಭಕ್ತರು ಗಂಗಾ ದೇವಿಯ ಪ್ರಸಾದವನ್ನು ಸ್ವೀಕರಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!