ಕಾರವಾರ:- ಗಬ್ಬೆದ್ದು ನಾರುತಿದ್ದ ಪುರಾಣ ಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥ ಕೆರೆಯ ಶುದ್ಧಿಗೆ ರಾಜ್ಯ ಸರಗಕಾರದಿಂದ ಅಗತ್ಯ ಹಣ ನೀಡಲಾಗುವುದು ಎಂದು ಶನಿವಾರ ಸಂಜೆ ಜಿಲ್ಲಾ ಪಂಚಾಯತ್ತಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಈಶ್ವರಪ್ಪ ಹೇಳಿದರು.
ಕಳೆದ ವರ್ಷ ನವಂಬರ್ ತಿಂಗಳಲ್ಲಿ ಗೋಕರ್ಣಕ್ಕೆ ಆಗಮಿಸಿದ್ದ ಸಚಿವ ಈಶ್ವರಪ್ಪನವರು ಕೋಟಿ ತೀರ್ಥಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಆಲಿಸಿದ್ದರು.
ಪುಣ್ಯ ಕ್ಷೇತ್ರದ ಗಂಗೆ ಮಲೀನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಅವರು ಕೋಟಿ ತೀರ್ಥ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು.

ಕೋಟಿತೀರ್ಥ ಅಭಿವೃದ್ಧಿಗೆ ಸೂಚನೆ.
ಗೋಕರ್ಣದ ಕೋಟಿತೀರ್ಥ ಅಭಿವೃದ್ಧಿಗೆ ₹ 1.50 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಶನಿವಾರ ನಡೆದ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಜಿಲ್ಲಾ ಪಂಚಾಯಿತಿಯಲ್ಲಿ ಅನುದಾನದ ಲಭ್ಯತೆಯ ಬಗ್ಗೆ ಪರಿಶೀಲಿಸಿ. ಒಂದುವೇಳೆ ಕೊರತೆಯಿದ್ದರೆ ತಿಳಿಸಿ, ಅನುದಾನ ಬಿಡುಗಡೆ ಮಾಡಿಸಲಾಗುವುದು. ಕೂಡಲೇ ಕಾಮಗಾರಿ ಆರಂಭವಾಗಬೇಕು’ ಎಂದು ತಾಕೀತು ಮಾಡಿದರು.
ಆರು ವರ್ಷದ ಹಿಂದೆ ಸ್ವಚ್ಚತೆ ಮಾಡಲಾಗಿದ್ದ ಕೊಟಿ ತೀರ್ಥ
ಕೋಟಿ ತೀರ್ಥವನ್ನ ಕಳೆದ ಆರು ವರ್ಷದ ಹಿಂದೆ ಸ್ವಚ್ಚತೆ ಮಾಡಲಾಗಿತ್ತು. ಹೊಂಡದ ಹೂಳೆತ್ತಿ ಒಂದು ಹಂತದ ಸ್ವಚ್ಛತೆ ಮಾಡಲಾಗಿತ್ತು ಆದರೆ, ಆ ಸಂದರ್ಭದಲ್ಲಿ ಅವೈಜ್ಙಾನಿಕ ಪದ್ದತಿ ಅನುಸರಿಸಿದರಿಂದ ಹೊಂಡ ಈ ರೀತಿ ಗಲೀಜಾಗಿದೆ ಎನ್ನಲಾಗಿದೆ.
ಕೋಟಿ ತೀರ್ಥದ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಕಸ ಕಡ್ಡಿಗಳು, ಅವ್ಯಾಹತವಾಗಿ ಬೆಳೆದುಕೊಂಡು ಪಾಚಿ, ಕೊಳೆತು ನಾರುತ್ತಿರುವ ಹೂವುಗಳಿಂದ ಕೋಟಿ ತೀರ್ಥದ ಅಂದ ಕೆಟ್ಟು ಸ್ವಚ್ಚತೆ ಇಲ್ಲದೆ ಪ್ರಾಮುಖ್ಯತೆ ಕಳೆದುಕೊಂಡಿದೆ.

ಹಿಂದೂ ಸಂಪ್ರದಾಯದ ವಿಧಿ ವಿಧಾನಗಳನ್ನು ಆಚರಿಸುವ ಪವಿತ್ರ ಪುಷ್ಕರಣಿ ಹೊಂಡ ಈಗ ತನ್ನ ಅಂದವನ್ನು ಕಳೆದುಕೊಂಡಿದೆ. ಗೋಕರ್ಣ ಶಿವರಾತ್ರಿ ಸಂದರ್ಭದಲ್ಲಿ ಇಲ್ಲಿನ ಗ್ರಾ.ಪಂ ದಿಂದ ಸ್ವಚ್ಚತೆ ಕಾರ್ಯ ಮಾಡಲಾಗುತ್ತದೆ. ಆದರೆ, ಇದು ಕೇವಲ ತಾತ್ಕಾಲಿಕ. ಪೂರ್ಣ ಪ್ರಮಾಣದ ಸ್ವಚ್ಚತೆ ಆಗುತ್ತಿಲ್ಲ, ಇದರಿಂದಾಗಿ ಇಲ್ಲಿನ ನೀರಿನಲ್ಲಿ ಸ್ನಾನ ಮಾಡಲು ಸಹ ಭಕ್ತರು ಹೆದರುತಿದ್ದರು.
ಸದ್ಯ ಹಣ ಬಿಡುಗಡೆಗೆ ಎಲ್ಲಾ ಸಿದ್ದತೆಗಳು ನಡೆದಿದ್ದು ಪವಿತ್ರ ಗಂಗೆ ಶುದ್ಧವಾಗಲಿದ್ದಾಳೆ.