ಗೋಕರ್ಣದಲ್ಲಿ ಬರುವ ಭಕ್ತರ ಪೂಜೆ, ಪ್ರಸಾದ ಕಿತ್ತುಕೊಂಡ ಅರ್ಚಕರು! ಮತ್ತೆ ಬುಗಿಲೆದ್ದ ಮಹಾಬಲೇಶ್ವರನ ಹಕ್ಕು ವಿವಾದ?

1807

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ದ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ವಿವಾದ ಮತ್ತೆ ತಾರಕಕ್ಕೆ ಏರಿದೆ.

ಮಹಾಬಲೇಶ್ವರ ಮಂದಿರದ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ ವಿಚಾರದಲ್ಲಿ
ಉಪಾಧಿವಂತರ ಎರಡು ಬಣಗಳ ನಡುವೆ ವಿವಾಧ ಏರ್ಪಟ್ಟಿದೆ. ಹೀಗಾಗಿ ಸೆ.27ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ.

ಈ ಸಂಬಂಧ ದೇವಸ್ಥಾನದ ಉಸ್ತುವಾರಿ ಸಮಿತಿ ಕಾರ್ಯದರ್ಶಿಯೂ ಆಗಿರುವ ಉಪ ವಿಭಾಗಾಧಿಕಾರಿ ರಾಹುಲ ಪಾಂಡೆ ಯವರು ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಉಪವಿಭಾಗಾಧಿಕಾರಿ ರಾಹುಲ ಪಾಂಡೆ ಜಿಲ್ಲೆಯ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಎರಡು ಬಣಗಳ ನಡುವಿನ ವಿವಾದದ ಕಾರಣ ಭಕ್ತರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ.

ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸೆ.27ರಂದು ಸಮಿತಿಯ ಸಭೆ ನಡೆಯಲಿದೆ. ಎರಡು ಬಣಗಳ ನಡುವಿನ ವಿವಾದ, ಭಕ್ತರಿಗೆ ಪೂಜೆ ಹಾಗೂ ಸೇವೆಗೆ ವ್ಯವಸ್ಥೆ ವಿಷಯವನ್ನು ಸಭೆಯಲ್ಲಿ ಮಂಡಿಸಲಾಗುವುದು.

ಸಭೆಯ ನಿರ್ಣಯದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.

ಹೊರ ಊರಿನಿಂದ ಬರುವ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ,ಪ್ರಸಾದಕ್ಕೆ ನಿರ್ಬಂಧ.

ಸದ್ಯ ಭಕ್ತರು ಹೊರಭಾಗದಿಂದ ಮಾತ್ರ ದೇವರ ದರ್ಶನ ಕ್ಕೆ ಅವಕಾಶ ಇದ್ದು, ಸ್ಥಳೀಯರು ವೈಯಕ್ತಿಕ ಪೂಜೆ ಸಲ್ಲಿಸಬಹುದಾಗಿದೆ. ಇದರಂತೆ ಸ್ಥಳೀಯರಿಗೆ
ಬೆಳಗ್ಗೆ 6 ರಿಂದ 11 ಹಾಗೂ ಅಪರಾಹ್ನ
5 ರಿಂದ ರಾತ್ರಿ 7 ರ ವರೆಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೇ ಉಪಾದೀವಂತ ಪಂಗಡದ ಗುದ್ದಾಟದಿಂದಾಗಿ ಹೊರಭಾಗದಿಂದ ಬರುವ ಭಕ್ತರಿಗೆ ಆತ್ಮಲಿಂಗ ಸ್ಪರ್ಷ ಪೂಜೆ,ಪ್ರಸಾದಗಳಿಗೆ ಅವಕಾಶ ಮಾಡಿಕೊಡಲಾಗಿಲ್ಲ.

ದೇವಸ್ಥಾನದಲ್ಲಿ ಅಹಿತಕರ ಘಟನೆ ನೆಡೆಯದಂತೆ ಪೂಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:-

https://kannadavani.news/daily-astrology-horoscope21-09-2021-kannada-news/
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!