ಕಾರವಾರ:- ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಾ ಬೈಕ್ ಸವಾರಿ ಮಾಡುತಿದ್ದ ವ್ಯಕ್ತಿಯೊಬ್ಬ ಬಸ್ ಗಾಗಿ ಕಾಯುತಿದ್ದ ಕುಟುಂಬದವರ ಮೇಲೆ ಹತ್ತಿಸಿ ಐದು ಜನರಿಗೆ ಗಂಭೀರ ಗಾಯ ಮಾಡಿದ ಘಟನೆ ಶುಕ್ರವಾರ ಸಂಜೆ ಗೋಕರ್ಣದ ಗಂಗಾವಳಿ ರಸ್ತೆಯಲ್ಲಿ ನಡೆದಿದೆ.
ಬೈಕ್ ಸವಾರ ಹನೇಹಳ್ಳಿ ರಾಘವೇಂದ್ರ ವಿಠ್ಠಲ್ ಗೌಡ ಅಪಘಾತ ಮಾಡಿದವನಾಗಿದ್ದು ಮಕ್ಕಳನ್ನು ವೈದ್ಯರ ಬಳಿ ತೊರಿಸಲು ಬಸ್ ಗಾಗಿ ಕಾಯುತ್ತಾ ನಿಂತಿದ್ದ ಮಾನ್ಯ ,ಉದಯ್ ನಾಯ್ಕ್ 10 ವರ್ಷ , ರಂಜಿತಾ ಶೇಖರ್ ನಾಯ್ಕ್ 14 ವರ್ಷ , ಪ್ರವೀಣಾ ಶೇಖರ್ ನಾಯ್ಕ್ 45. ವರ್ಷ, ಒಂದು ವರ್ಷದ ಪ್ರಣತಿ ಸುರೇಶ ನಾಯ್ಕ್ ,ಹಾಗೂ ಬೈಕ್ ಸವಾರ ಕೂಡ ಗಂಭೀರ ಗಾಯಗೊಂಡಿದ್ದಾನೆ.



ಗಾಯಾಳುಗಳನ್ನು ಗೊಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಕಾರವಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.