ಗೋಕರ್ಣ :10 ಸಾವಿರ ಮೌಲ್ಯದ ಗಾಂಜಾ ವಶ,ಆರೋಪಿ ಬಂಧನ.

406

ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಬಳಿಯ ಬಿಜ್ಜೂರು ಗ್ರಾಮದ ತಾರಮಕ್ಕಿ ರಸ್ತೆಯ ಪಕ್ಕದಲ್ಲಿ ಪ್ರವಾಸಿಗರಿಗೆ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಗಣಪತಿ ಮಹಾಬಲೇಶ್ವರ ಗೌಡ (53) ಬಂಧಿತ ವ್ಯಕ್ತಿಯಾಗಿದ್ದಾನೆ. ಬಂಧಿತನಿಂದ
ಸುಮಾರು 510 ಗ್ರಾಂ ತೂಕದ ಸುಮಾರು 10 ಸಾವಿರ ರೂಪಾಯಿ ಗಾಂಜಾ ಮಾದಕ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ.

ಈತ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದ ವೇಳೆ ಗೋಕರ್ಣ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ ಎಸ್ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಅರವಿಂದ ಶೆಟ್ಟಿ, ಜಿ.ಬಿ ರಾಣೆ, ನಾಗರಾಜ ಪಟಗಾರ, ವಸಂತ್ ನಾಯ್ಕ, ರಾಜೇಶ ಹೆಚ್ ನಾಯ್ಕ, ಸಚಿನ್ ನಾಯ್ಕ, ಶಿವಾನಂದ ಗೌಡ, ಕಿರಣ್ ಬಾಳೂರು, ರವಿ ಹಾಡಕರ ರವರನ್ನೊಳಗೊಂಡ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ.
ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!