BREAKING NEWS
Search

ಗೋಕರ್ಣ ದಲ್ಲಿ ಹೊಸಕಾಮಗಾರಿಗೆ ಸಂಸದರ ಹಣ ನೀರಲ್ಲಿ ಹೋಮ!

615

ಗೋಕರ್ಣ :- ಸರ್ಕಾರಿ ಕೆಲಸ ಎಂದರೆ ಮಾಡಿದ ಕೆಲಸವನ್ನು ಮತ್ತೆ ಮಾಡುವುದೇ? ಹೀಗೊಂದು ಪ್ರಶ್ನೆ ಸಾರ್ವಜನಿಕರಲ್ಲಿ ಏಳುತ್ತಲೇ ಇರುತ್ತದೆ.ಇದಕ್ಕೊಂದು ನಿದರ್ಶನ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ. ಹೌದು ಗಂಗಾವಳಿ ರಸ್ತೆಯ ಆಚಾರಿ ಕಟ್ಟೆ ಬಳಿ ಆರು ವರ್ಷದ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಅನುದಾನದಲ್ಲಿ ಬಸ್ ತುಂಗುದಾಣ ಮತ್ತು ಅದರ ಮುಂಭಾಗ ಸಿಮೆಂಟ್ ಬ್ಲಾಕ್ ಅಳವಡಿಸಲಾಗಿತ್ತು.ಆದರೇ ಇದೀಗ ರಸ್ತೆ ಕಾಮಗಾರಿಗಾಗಿ ಅವಷ್ಯಕತೆ ಇಲ್ಲದಿದ್ದರೂ ಎರಡು ಲಕ್ಷ ಕರ್ಚುಮಾಡಿ ಮಾಡಿದ ಸಿಮೆಂಟ್ ಬ್ಲಾಕ್ ಅನ್ನು ನಾಶ ಮಾಡಲಾಗಿದೆ.
ಈ ಕುರಿತು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಅನಾವಷ್ಯಕವಾಗಿ ಉತ್ತಮ ಸ್ಥಿತಿಯಲ್ಲಿರುವ ಬ್ಲಾಕ್ ಗಳನ್ನು ತೆಗೆದುಹಾಕಲಾಗಿದೆ ಸಾರ್ವಜನಿಕರ ತೆರಿಗೆಯಿಂದ ಬರುವ ಸರ್ಕಾರಿ ಹಣವನ್ನು ಪೊಲು ಮಾಡುವುದು ಹೀಗೆ ಏನು? ಎಂಬ ಪ್ರಶ್ನೆ ಏಳುವಂತಾಗಿದ್ದು ಉತ್ತರ ಸಿಗದಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!