ಗೋ ಸ್ವರ್ಗ ದಲ್ಲಿ ಜ.14 ಗೋವಿನ ದಿನ:ಹಳೆ ಸಂಪ್ರದಾಯಕ್ಕೆ ಹೊಸ ಮೆರುಗು.

1399

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ರೀ ರಾಮದೇವ ಭಾನ್ಕುಳಿ ಮಠದಲ್ಲಿ ಇದೇ ತಿಂಗಳ 14 ರಿಂದ 17 ರ ವರೆಗೆ ಗೋದಿನ ಹಾಗೂ ಆಲೆಮನೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಗೋದಿನ ಸಮಿತಿ ಅಧ್ಯಕ್ಷ ಎಂ.ಜಿ ರಾಮಚಂದ್ರ ಮರಡುಮನೆ ರವರು ತಿಳಿಸಿದ್ದಾರೆ.

ಇಂದು ಸಿದ್ದಾಪುರದ ಗೋಸ್ವರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಮಚಂದ್ರಾಪುರ ಮಠದ ಶ್ರೀಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನದಲ್ಲಿ ಸಾವಿರ ಗೋವುಗಳ ಆಶ್ರಯ ತಾಣವಾಗಿರುವ ಗೋಸ್ವರ್ಗದಲ್ಲಿ ಹಳೆಯ ಸಂಪ್ರದಾಯಕ್ಕೆ ಹೊಸ ಮೆರುಗು ನೀಡುವ ನಿಟ್ಟಿನಲ್ಲಿ ಗೋದಿನ ಹಾಗೂ ಆಲೆಮನೆ ಹಬ್ಬ ಆಚರಿಸಲಾಗುತ್ತಿದೆ ಎಂದರು.

ಸಿದ್ದಾಪುರದಲ್ಲಿ ಇರುವ ಗೋಸ್ವರ್ಗ .

ಜ14 ರ ಸಂಕ್ರಾಂತಿಯ ದಿನದಂದು ಗೋವುಗಳಿಗೆ ಶೃಂಗರಿಸಿ ವಿಶೇಷ ಪೂಜೆ ನೆರವೇರಿಸಲಾಗುವುದು, 15 ರಂದು ಮಲೆನಾಡಿನ ಅಳವಿನಂಚಿನಲ್ಲಿರುವ ಮಲೆನಾಡು ಗಿಡ್ಡ ಜಾತಿಯ ಹಸುವಿನ ಉಳಿಸುವ ಕುರಿತು ವಿಚಾರ ಗೋಷ್ಠಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು ಸಾರ್ವಜನಿಕರು ಭಾಗವಹಿಸುವಂತೆ ಕೋರಿದ್ದಾರೆ.

ಗೋಸರ್ಗದಲ್ಲಿ ಜ.14 ರಂದು ನಡೆಯುವ ಕಾರ್ಯಕ್ರಮಗಳ ವಿವರ ಈಕೆಳಗಿನಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!