BREAKING NEWS
Search

ಉತ್ತರ ಕನ್ನಡ ಜಿಲ್ಲೆ ಗ್ರಾ.ಪಂ ಚುನಾವಣೆ ಹಿನ್ನೋಟ!ಕ್ಷೇತ್ರದ ವಿವರ ಇಲ್ಲಿದೆ.

988

ಕಾರವಾರ :- ನಾಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮಪಂಚಾಯ್ತಿ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು ಜಿಲ್ಲೆಯಾಧ್ಯಾಂತ 12 ಮತ ಎಣಿಕಾ ಕೇಂದ್ರವನ್ನು ತೆರೆಯಲಾಗಿದೆ. ತಾಲೂಕುವಾರು ತೆರದಿರುವ ಮತಗಟ್ಟೆಗಳಲ್ಲಿ 144 ಸೆಕ್ಷನ್ ಜಾರಿಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದ್ದು,ಭದ್ರತೆಗಾಗಿ 5 ಡಿ.ವೈ.ಎಸ್.ಪಿ ಅಧಿಕಾರಿಗಳು,14 ಸಿ.ಪಿ.ಐ ಅಧಿಕಾರಿಗಳು,43 ಪಿ.ಎಸ್.ಐ,115 ಎ.ಎಸ್.ಐ ,302 ಹೆಡ್ ಕಾನ್ಟೇಬಲ್ ಗಳು,452 ಪೊಲೀಸ್ ಸಿಬ್ಬಂದಿ,70 ಹೋಮ್ ಗಾರ್ಡ ,12 ಡಿ.ಆರ್ ತುಕಡಿ, 5 ಕೆ.ಎಸ್.ಆರ್.ಪಿ ತುಕಡಿಯನ್ನು ಬಂದವಸ್ತ್ ಗೆ ನಿಯೋಜನೆ ಮಾಡಲಾಗಿದೆ.

ಮೊದಲ ಹಾಗೂ ಎರಡನೇ ಹಂತದಲ್ಲಿ ಮತದಾನವಾದ ವಿವರ ಈ ಕೆಳಗಿನಂತಿದೆ:-

ಮೊದಲ ಹಂತದಲ್ಲಿ ಕರಾವಳಿಯಲ್ಲಿ ಆದ ಮತದಾನವಾದ ವಿವರ:-

ಒಟ್ಟು ಮತದಾನ ಶೇ.74.83%

ಕಾರವಾರ : 71.22

ಅಂಕೋಲಾ‌ : 75.84

ಕುಮಟಾ : 75.3

ಹೊನ್ನಾವರ: 76.17

ಭಟ್ಕಳ : -74.63

ಎರಡನೇ ಹಂತದಲ್ಲಿ ಶೇಕಡವಾರು ಮತದಾನವಾದ ವಿವರ:-

ಶಿರಸಿ- 81.00
ಸಿದ್ದಾಪುರ- 82.20
ಯಲ್ಲಾಪುರ – 80.87
ಮುಂಡಗೋಡು- 83.99
ಹಳಿಯಾಳ- 84.64
ದಾಂಡೇಲಿ- 75.23
ಜೋಯಿಡಾ-76.32

ಒಟ್ಟು :- 81.41 % ಶೇಕಡ ಮತದಾನವಾಗಿದೆ.

ಯಾವ ತಾಲೂಕಿನಲ್ಲಿ ಅವಿರೋಧ ಆಯ್ಕೆ ಎಷ್ಟು? ಅವಿರೋಧ ಸಂಖ್ಯೆ ಎಷ್ಟು?,ಸ್ಥಾನಗಳೆಷ್ಟು ವಿವರ ಈ ಕೆಳಗಿನಂತಿದೆ.

ಕಾರವಾರ

ಗ್ರಾಮ ಪಂಚಾಯತ್: 18

ಒಟ್ಟು ಸ್ಥಾನಗಳ ಸಂಖ್ಯೆ: 226

ಅಭ್ಯರ್ಥಿಗಳು: 625

ಅವಿರೋಧ ಆಯ್ಕೆ: 19

ಅಂಕೋಲಾ

ಗ್ರಾಮ ಪಂಚಾಯತ್-21

ಒಟ್ಟು ಸ್ಥಾನಗಳ ಸಂಖ್ಯೆ-226

ಅಭ್ಯರ್ಥಿಗಳು: 635

ಅವಿರೋಧ ಆಯ್ಕೆ: 19

ಕುಮಟಾ

ಗ್ರಾಮ ಪಂಚಾಯತ್: 22

ಒಟ್ಟು ಸ್ಥಾನಗಳ ಸಂಖ್ಯೆ: 321

ಅಭ್ಯರ್ಥಿಗಳು: 937

ಅವಿರೋಧ ಆಯ್ಕೆ: 22

ಹೊನ್ನಾವರ

ಗ್ರಾಮ ಪಂಚಾಯತ್: 24

ಒಟ್ಟು ಸ್ಥಾನಗಳ ಸಂಖ್ಯೆ: 323

ಅಭ್ಯರ್ಥಿಗಳು: 866

ಅವಿರೋಧ ಆಯ್ಕೆ: 31

ಭಟ್ಕಳ

ಗ್ರಾಮ ಪಂಚಾಯತ್: 16

ಒಟ್ಟು ಸ್ಥಾನಗಳ ಸಂಖ್ಯೆ: 284

ಅಭ್ಯರ್ಥಿಗಳು: 672

ಅವಿರೋಧ ಆಯ್ಕೆ: 20

ಶಿರಸಿ

ಗ್ರಾಮ ಪಂಚಾಯತ್: 32

ಒಟ್ಟು ಸ್ಥಾನಗಳ ಸಂಖ್ಯೆ: 323

ಅಭ್ಯರ್ಥಿಗಳು: 857

ಅವಿರೋಧ ಆಯ್ಕೆ: 33

ಸಿದ್ದಾಪುರ

ಗ್ರಾಮ ಪಂಚಾಯತ್: 23

ಒಟ್ಟು ಸ್ಥಾನಗಳ ಸಂಖ್ಯೆ: 221

ಅಭ್ಯರ್ಥಿಗಳು: 620

ಅವಿರೋಧ ಆಯ್ಕೆ:15

ಯಲ್ಲಾಪುರ

ಗ್ರಾಮ ಪಂಚಾಯತ್: 15

ಒಟ್ಟು ಸ್ಥಾನಗಳ ಸಂಖ್ಯೆ: 158

ಅಭ್ಯರ್ಥಿಗಳು: 416

ಅವಿರೋಧ ಆಯ್ಕೆ: 12

ಮುಂಡಗೋಡ

ಗ್ರಾಮ ಪಂಚಾಯತ್: 16

ಒಟ್ಟು ಸ್ಥಾನಗಳ ಸಂಖ್ಯೆ: 194

ಅಭ್ಯರ್ಥಿಗಳು: 527

ಅವಿರೋಧ ಆಯ್ಕೆ- 6

ಹಳಿಯಾಳ

ಗ್ರಾಮ ಪಂಚಾಯತ್: 20

ಒಟ್ಟು ಸ್ಥಾನಗಳ ಸಂಖ್ಯೆ: 212

ಅಭ್ಯರ್ಥಿಗಳು: 500

ಅವಿರೋಧ ಆಯ್ಕೆ: 6

ದಾಂಡೇಲಿ

ಗ್ರಾಮ ಪಂಚಾಯತ್: 4

ಒಟ್ಟು ಸ್ಥಾನಗಳ ಸಂಖ್ಯೆ: 37

ಅಭ್ಯರ್ಥಿಗಳು: 111

ಅವಿರೋಧ ಆಯ್ಕೆ: 0

ಜೋಯಿಡಾ

ಗ್ರಾಮ ಪಂಚಾಯತ್: 16

ಒಟ್ಟು ಸ್ಥಾನಗಳ ಸಂಖ್ಯೆ: 137

ಅಭ್ಯರ್ಥಿಗಳು: 421

ಅವಿರೋಧ ಆಯ್ಕೆ: 5

ಜಿಲ್ಲೆಯಲ್ಲಿ 188 ಗ್ರಾ.ಪಂ ಸದಸ್ಯತ್ವಕ್ಕೆ ಅವಿರೋಧ ಆಯ್ಕೆಯಾಗಿದ್ದು ಒಟ್ಟು 2662 ಸ್ಥಾನಗಳಿದ್ದು ,227 ಗ್ರಾಮಪಂಚಾಯ್ತಿ ಗಳ ಅಭ್ಯರ್ಥಿಗಳ ಹಣೆಬರಹ ನಾಳೆ ತೀರ್ಮಾನವಾಗಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!