ಕಾರವಾರ :- ಮರಾಠಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆ ಇಂದು ಕರ್ನಾಟಕ ಬಂದ್ ಮಾಡಿ ಹೋರಾಟಕ್ಕೆ ಇಳಿದಿದ್ದಾರೆ.ಆದರೇ ಮರಾಠಿ ಸಂಘಟನೆಯಿಂದ ಗಡಿ ಜಿಲ್ಲೆ ಉತ್ತರ ಕನ್ನಡದ ಹಳಿಯಾಳ ದಲ್ಲಿ ಮರಾಠಿ ಸಂಘಟನೆ ನಗರದಲ್ಲಿ ಮೆರವಣಿಗೆ ಮಾಡುವ ಮೂಲಕ ಮರಾಠ ಪ್ರಾಧಿಕಾರ ನಿಗಮಮಂಡಳಿಯನ್ನು ರಚಿಸಿದ್ದಕ್ಕೆ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಅಭಿನಂದನಾ ಪತ್ರವನ್ನು ನೀಡಿದರು.


ಮರಾಠ ಸಂಘದ ಅಧ್ಯಕ್ಷರಾಗಿರುವ ನಾಗೇಂದ್ರ ಜಿಯೊಜಿ ರವರ ನೇತ್ರತ್ವದಲ್ಲಿ ಮೆರವಣಿಗೆ ನಡೆಸಿದ ಮರಾಠ ಸಂಘಟನೆ ನಗರದಾಧ್ಯಾಂತ ಮೆರವಣಿಗೆ ಮೂಲಕ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಹಶಿಲ್ದಾರ್ ಕಚೇರಿಗೆ ತೆರಳಿ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ಅಭಿನಂದನಾ ಪತ್ರ ಸಲ್ಲಿಸಿದರು.