ಹಳಿಯಾಳ:- ಹಳಿಯಾಳ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾಗಿರುವ ರವಿ ಮಿರಜಕರ ವಿರುದ್ಧ ಕರ್ತವ್ಯಕ್ಕೆ ನಿಯೋಜನೆಗೆ ಹಣದ ಬೇಡಿಕೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಹಳಿಯಾಳ ಗೃಹ ರಕ್ಷಕ ದಳದ ಸಿಬ್ಬಂದಿಗಳಿಬ್ಬರು ಗೃಹ ರಕ್ಷಕದಳದ ಜಿಲ್ಲಾ ಸಮಾದೇಷ್ಟರಿಗೆ ಲಿಖಿತ ದೂರು ನೀಡಿದ್ದಾರೆ.
ತಮಗಾಗುತ್ತಿರುವ ಅನ್ಯಾಯದ ಕುರಿತು ಹಳಿಯಾಳದಲ್ಲಿ ತಮ್ಮ ದೂರಿನ ದಾಖಲೆಗಳೊಂದಿಗೆ ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಹಳಿಯಾಳ ಗೃಹ ರಕ್ಷಕ ದಳದ ನಾಗರಾಜ ಕೃಷ್ಣಾ ನಿರಂಜನ ಮತ್ತು ಶ್ರೀನಿವಾಸ ಲಕ್ಷ್ಮಣ ಉಪ್ಪಾರ ಅವರು ಪ್ರಭಾರ ಘಟಕಾಧಿಕಾರಿ ರವಿ ಮಿರಜಕರ ಇತರ ಹಿರಿಯ ಸಿಬ್ಬಂದಿಗಳಿಗೆ ಗೌರವ ಕೊಡುವುದಿಲ್ಲ, ಸಾರ್ವಜನೀಕವಾಗಿ ತಾವೇ ಪೋಲಿಸ್ ಸಿಬ್ಬಂದಿಯಂತೆ ವರ್ತಿಸುವುದು, ಕರ್ತವ್ಯ(ಡ್ಯೂಟಿ) ನೀಡಲು ಹಣ ಕೆಳುವುದು, ಮಾಡದೆ ಇರುವ ಕರ್ತವ್ಯದ ಹಣವನ್ನು ನಮ್ಮ ಹೆಸರಿನಲ್ಲಿ ತೆಗೆದು ಭ್ರಷ್ಟಾಚಾರ ನಡೆಸಿರುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಿರುವ ಸಿಬ್ಬಂದಿಗಳು ಈ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ದೂರು ನೀಡಿ ತಿಂಗಳುಗಳೇ ಕಳೆದರು ಸಹ ಈವರೆಗೆ ನ್ಯಾಯ ದೊರಕದೆ ಇರುವುದರಿಂದ ಮಾಧ್ಯಮದ ಮುಂದೆ ಬರಬೇಕಾಗಿದೆ ಎಂದು ತಿಳಿಸಿದರು.

ಅಲ್ಲದೇ ಇದೇ ಸಂದರ್ಭದಲ್ಲಿ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಸಹಿತ ಎಸ್ಪಿ ಅವರಲ್ಲಿ ಲಿಖಿತ ದೂರು ನೀಡಿ ಪ್ರಭಾರ ಘಟಕಾಧಿಕಾರಿ ರವಿ ಮಿರಜಕರ ಅವರಿಂದ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಅನ್ಯಾಯವಾಗುತ್ತಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ದಾಂಡೇಲಿ ಡಿವೈಎಸ್ಪಿ, ಹಳಿಯಾಳ ಸಿಪಿಐ, ಪಿಎಸ್‍ಐ ಅವರಲ್ಲೂ ಸಾಕಷ್ಟು ಬಾರಿ ಮೌಖಿಕ ದೂರು ನೀಡಿದರು ಸಹ ಗೃಹ ರಕ್ಷಕದಳದ ಸಿಬ್ಬಂದಿಗಳೊಂದಿಗೆ ಅಮಾನವೀಯವಾಗಿ ಹಾಗೂ ದೌರ್ಜನ್ಯಯುತವಾಗಿ ನಡೆದುಕೊಳ್ಳುತ್ತಿರುವ ರವಿ ಮಿರಜಕರ ಅವರ ಮೇಲೆ ಈವರೆಗೆ ಯಾವುದೇ ಕ್ರಮ ಜರುಗದೆ ಇರುವುದರಿಂದ, ಆತ ಮತ್ತೆ ತಮ್ಮ ಮೇಲೆ ದ್ವೇಷ ಸಾಧನೆ ಮಾಡುತ್ತಿರುವುದು ಕಂಡು ಬರುತ್ತಿದ್ದು ತಮಗೆ ಕರ್ತವ್ಯವನ್ನು ನೀಡದೆ ಸತಾಯಿಸುತ್ತಿದ್ದಾನೆ. ಅಲ್ಲದೇ ಕರ್ತವ್ಯ ನೀಡಲು ಹಣದ ಬೇಡಿಕೆ ಇಡುತ್ತಿರುವುದರಿಂದ ಅನ್ಯಾಯವಾಗುತ್ತಿದೆ, ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ತಮಗೆ ನ್ಯಾಯ ದೊರಕದೆ ಇರುವುದರಿಂದ ಮಾಧ್ಯಮಗಳು,