ಸಂಸದ ಸ್ಥಾನದಿಂದ ಅನರ್ಹಗೊಂಡ ಪ್ರಜ್ವಲ್‌ ರೇವಣ್ಣ|ಕಾರಣ ಏನು ಗೊತ್ತಾ?

216

ಹಾಸನ:- ಹಾಸನದ ಸಂಸದ ಪ್ರಜ್ವಲ್ ರೇವಣ್ಣ ರವರ ಸಂಸದ ಸ್ಥಾನವನ್ನು ಅನರ್ಹ ಗೊಳಿಸಿ ಶುಕ್ರವಾರ ಹೈಕೋರ್ಟ ಆದೇಶ ನೀಡಿದೆ.

ವಕೀಲ ದೇವರಾಜೇಗೌಡರವರು ಕಳೆದ ನಾಲ್ಕು ವರ್ಷದ ಹಿಂದೆ ನೀಡಿದ್ದ ದೂರನ್ನು ಕೋರ್ಟ ನಲ್ಲಿ ವಾದ ವಿವಾದದ ನಂತರ ಪರೀಶೀಲಿಸಿ ಈ ತೀರ್ಪು ನೀಡಲಾಗಿದೆ.

ಕಳೆದಬಾರಿ ಲೋಕಸಭಾ ಚುನಾವಣೆಗೆ ನಾಮಪತ್ರ ವನ್ನು ಸಲ್ಲಿಸಿದ್ದ ಪ್ರಜ್ವಲ್ ರೇವಣ್ಣ ( Prajwal Revanna) ಆಸ್ತಿ ವಿವರ,ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಆದಾಯ ತರಿಗೆ ಮಾಹಿತಿಯನ್ನು ತಪ್ಪಾಗಿ ನೀಡಿದ್ದರು. ದೂರು ನೀಡಿದ ವಕೀಲ ದೇವರಾಜೇಗೌಡರವರು ಹೇಳುವಂತೆ
23 ಕೋಟಿ ಆಸ್ತಿ ವಿಚಾರ ಮುಚ್ಚಿಟ್ಟಿದ್ದರು. ಬ್ಯಾಂಕ್‌ ಬ್ಯಾಲೆನ್ಸ್‌ ವಿವರವನ್ನೂ ತಪ್ಪು ಕೊಟ್ಟಿದ್ದರು. ಆದಾಯ ತೆರಿಗೆ ಸರಿಯಾಗಿ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿದ್ದರು. ಇದೆಲ್ಲವನ್ನು ನಾವು ಸಾಬೀತುಪಡಿಸಿದ್ದೇವೆ. ಅಷ್ಟೇ ಅಲ್ಲದೇ ಚುನಾವಣಾ ಸಂದರ್ಭದಲ್ಲಿ ಪ್ರಜ್ವಲ್‌ ರೇವಣ್ಣ ಪರವಾಗಿ ಅವರ ತಂದೆ 200 ಕ್ಕೂ ಹೆಚ್ಚು ಕಳ್ಳ ವೋಟುಗಳನ್ನು ಹಾಕಿಸಿದ್ದರು. ಅವರು ಜನರಿಗೆ ಹಣ ಹಂಚುವ ದೃಶ್ಯವೂ ಸೆರೆಯಾಗಿತ್ತು. ಇದರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು.

ಹಾಸನದ ಬಾವಿಕೆರೆ ಗ್ರಾಮದಲ್ಲಿ ಸರ್ಕಾರಿ ಜಾಗವನ್ನ ರಿಜಿಸ್ಟರ್‌ ಮಾಡಿಕೊಂಡಿದ್ದರು. ನಾವು ಮಾಡಿದ ಎಲ್ಲಾ ಆರೋಪಗಳಿಗೂ ಪೂರಕ ದಾಖಲಾತಿಗಳನ್ನು ಒದಗಿಸಿ ಸಾಬೀತುಪಡಿಸಿದ್ದೆವು. ಈ ದಾಖಲೆಗಳನ್ನು ಸಲ್ಲಿಸಲು ನಾಲ್ಕು ವರ್ಷಗಳ ಸುದೀರ್ಘ ಸಮಯ ಬೇಕಾಯಿತು.

ನಮ್ಮ ಹೋರಾಟಕ್ಕೆ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಚುನಾವಣೆಯಲ್ಲಿ ನಿಲ್ಲಬೇಕಾದ ವ್ಯಕ್ತಿ ಸ್ವಚ್ಛವಾಗಿ ಇರಬೇಕು ಎಂಬ ಸಂದೇಶವನ್ನು ಕೋರ್ಟ್‌ ತನ್ನ ತೀರ್ಪಿನ ಮೂಲಕ ನೀಡಿದೆ ಎಂದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!