ಹವ್ಯಕ ವಿಷು ವಿಶೇಷ ಸ್ಪರ್ಧೆ–2021’ಕ್ಕೆ ಬರಹ ಆಹ್ವಾನ.

507

ಕಾರವಾರ: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸುತ್ತಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ‘ವಿಷು ವಿಶೇಷ ಸ್ಪರ್ಧೆ–2021’ಕ್ಕೆ ಬರಹಗಳನ್ನು ಆಹ್ವಾನಿಸುತ್ತಿದೆ.

ಹವ್ಯಕ ಭಾಷೆಯ ಸಾಹಿತಿಗಳನ್ನು ಗುರುತಿಸುವ ಉದ್ದೇಶದಿಂದ ಪ್ರತಿಷ್ಠಾನವು ಸೌರಮಾನ ಯುಗಾದಿಯ ಸಮಯದಲ್ಲಿ ಪ್ರತಿ ವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.

ಪ್ರಬಂಧ (ವಿಷಯ: ಕೋವಿಡ್ ಕಾಲದ ನಂತರದ ಜೀವನಶೈಲಿ, 750 ಪದ), ಕಥೆ (ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಗಳು, 1000 ಪದ), ಕವಿತೆ (ವಿಷಯ: ಕಳೆದೊಂದು ವರ್ಷ, 30 ಸಾಲುಗಳ ಮಿತಿ (ಛಂದೋಬದ್ಧ ಕವಿತೆಗಳಿಗೆ ಆದ್ಯತೆ) ಹಾಗೂ ನಗೆಬರಹ ((ಸದಭಿರುಚಿಯ ಲಘುಬರಹಕ್ಕೆ ಅವಕಾಶ) 500 ಪದ) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಎಲ್ಲ ಬರಹಗಳೂ ಕಡ್ಡಾಯವಾಗಿ ಹವ್ಯಕ ಭಾಷೆ– ಕನ್ನಡ ಲಿಪಿಯಲ್ಲಿರಬೇಕು. ಹವ್ಯಕ ಪರಂಪರೆ, ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ. ಸ್ಪರ್ಧೆಗೆ ಬರುವ ಬರಹ, ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು. ಪ್ರತಿ ವಿಭಾಗದಲ್ಲೂ ಪ್ರಥಮ ಮತ್ತು ದ್ವಿತೀಯ ಬಹುಮಾನಗಳು ಇರುತ್ತವೆ. ಕಳೆದ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದವರು ಈ ಬಾರಿ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ. ಬರಹಗಳನ್ನು ಕಳುಹಿಸಲು ಕೊನೆಯ ದಿನ ಏಪ್ರಿಲ್‌ 30.

ವಿಳಾಸ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ), C/o ಶ್ರೀಕರ ಅಸೋಸಿಯೇಟ್ಸ್, ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ, ಗಾಂಧಿ ನಗರ, ಸುಳ್ಯ, ದಕ್ಷಿಣ ಕನ್ನಡ – 574 239, ಇ–ಮೇಲ್‌: [email protected]

ಮಾಹಿತಿಗೆ 99012 00134, 99012 00134 ಅಥವಾ oppanna.com ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!