BREAKING NEWS
Search

ಪಶ್ಚಿಮ ಕರಾವಳಿಯಲ್ಲಿ ಮೊದಲಬಾರಿ ಪತ್ತೆಯಾದ “ಗಿಡುಗ” ಆಮೆ ಕಳೆಬರ.

1461

ಕಾರವಾರ:- ಪಶ್ಚಿಮ ಕರಾವಳಿಯಲ್ಲೇ ಮೊದಲಬಾರಿ ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಬೇಧ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ ,ಸ್ಥಳೀಯ ಭಾಷೆಯಲ್ಲಿ “ಗಿಡುಗ ಆಮೆ” ಎಂದು ಕರೆಯಲ್ಪಡುವ ಅಪರೂಪದ ಆಮೆ ಕಾರವಾರದ ತಿಳುಮಾತಿ ಬೀಚ್ ಬಳಿ ಅದರ ಕಳೆಬರಹವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ.

ಈ ಆಮೆಯು ಸಮುದ್ರ ಆಮೆಗಳಲ್ಲೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು , ಇದರ ಮುಖವು ಗಿಡಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟೆಗಳಿದ್ದು ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಫೆಸಿಪಿಕ್ ಮತ್ತು ಅಟ್ಲಾಂಟಿಕಾ ಸಾಗರಗಳಲ್ಲಿ ಹಾಗೂ ಅಂಡಮಾನ್ ,ನಿಕೋಬಾರ್ ನ ಆಳವಿಲ್ಲದ ಕಡಲಲ್ಲಿ ,ಹವಳದ ದಿಬ್ಬಗಳ ನಡುವೆ ಕಂಡುಬರಿತ್ತದೆ.

ಇದು 4000 ಕಿಲೋಮೀಟರ್ ಗೂ ಹೆಚ್ಚು ದೂರ ಸಮುದ್ರದಲ್ಲಿ ಪ್ರಯಾಣ ಬೆಳೆಸುವ ಸಾಮರ್ಥ್ಯ ಹೊಂದಿದೆ. ಒಂದು ಮೀಟರ್ ಉದ್ದ,100ಕಿಲೋಗ್ರಾಮ್ ತೂಕವಿರುವ ಈ ಆಮೆ 2ರಿಂದ 3 ವರ್ಷಗಳಿಗೊಮ್ಮೆ ಮಿಲನದ ನಂತರ ಮೊಟ್ಟೆಯಿಡುತ್ತದೆ. ಇದರ ಬಗ್ಗೆ ಈ ವರೆಗೂ ಹೆಚ್ಚು ಅಧ್ಯಯನಗಳು ಆಗಿರುವುದಿಲ್ಲ. ಬಂಗಾಳ ಕೊಲ್ಲಿ ಸೇರಿದಂತೆ ಇತರ ಭಾಗದಲ್ಲಿ ಕಂಡುಬರುವ “ಆಲಿವ್ ರಿಟ್ಟಿ” ಜಾತಿಯ ಆಮೆಗಳಂತೆ ಬಹುತೇಕ ಇದರ ಜೀವನಕ್ರಮ ಹೋಲುತ್ತದೆ.

ಕಾರವಾರದ ರವೀಂದ್ರ ನಾಥ ಕಡಲತೀರದಲ್ಲಿ ಕಳೆದ ಒಂದು ವಾರದ ಹಿಂದೆ ಎರಡು ಆಮೆಗಳ ಕಳೆಬರಹ ಪತ್ತೆಯಾಗಿತ್ತು. ಇದರ ನಂತರ ಇದೀಗ ಮತ್ತೆ ಆಮೆಯ ಕಳೆ ಬರಹ ಕಂಡುಬಂದಿದೆ. ಅತೀ ಹೆಚ್ಚು ಆಯುಷ್ಯವನ್ನು ಹೊಂದಿರುವ ಆಮೆಗಳು ಹೀಗೇ ಒಂದಾದಮೇಲೊಂದರಂತೆ ಸತ್ತು ಕಡಲತೀರಗಳಿಗೆ ಬರತೊಡಗಿದೆ. ಹೀಗಾಗಿ ಇವುಗಳ ಸಾವಿನ ಬಗ್ಗೆ ಹೆಚ್ಚು ಅಧ್ಯಯನದ ಅವಷ್ಯಕತೆ ಇದೆ.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರವಾರದ ಡಿ.ಸಿ.ಎಫ್ ವಸಂತ್ ರೆಡ್ಡಿ ರವರು ಇದೇ ಮೊದಲಬಾರಿಗೆ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಇದರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ,ವರದಿ ಬಂದ ಬಳಿಕ ಇದು ಹೇಗೆ ಸಾವಾಗಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!