
ಕಾರವಾರ :-ವಾಯುಭಾರ ಕುಸಿತದಿಂದಾಗಿ ಉತ್ತರಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ ಭಾಗಗಳಲ್ಲಿ ಗುಡುಗು ,ಗಾಳಿ ಸಹಿತ ಅಬ್ಬರಿಸಿದ ಮಳೆಯಾಗಿದೆ.
ವರುಣನ ಅಬ್ಬರಕ್ಕೆ ಜನಜೀವನ ತತ್ತರವಾಗಿದ್ದು ,ಶುಂಠಿ, ಭತ್ತ ಕೊಯ್ಲು ಮಾಡಿದ್ದ ರೈತರಿಗೆ ಮಳೆ ಸಂಕಷ್ಟ ತಂದೊಡ್ಡಿದರೆ ,ಜೋಳ ಬೆಳೆದಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮಾರ್ಚ್ 30ರ ವರೆಗೆ ಹವಾಮಾನ ಇಲಾಖೆ ಮಳೆಯ ಮುನ್ನೆಚ್ಚರಿಕೆ ಯನ್ನು ನೀಡಿದೆ.
ಮುಂಡಗೋಡಿನಲ್ಲಿ ಸಿಡಿಲ ಹೊಡೆತಕ್ಕೆ 17 ಕುರಿಗಳು ಸಾವು!


ಮುಂಡಗೋಡ ತಾಲೂಕಿನ ಸಿಂಗನಳ್ಳಿ ಬಳಿ ಸಿಡಿಲು ಬಡಿದು ಸ್ಥಳದಲ್ಲಿಯೇ 17 ಕುರಿಗಳು ಸಾವನ್ನಪ್ಪಿವೆ. ಮಾನು ನಾಗು ಶಳಕೆ ಎಂಬುವವರಿಗೆ ಸೇರಿದ ಕುರಿಗಳು ಎಂದಿನಂತೆ ಗದ್ದೆಯೊಂದರಲ್ಲಿ ಮೇಯುತ್ತಿದ್ದವು. ಈ ವೇಳೆ ಏಕಾಏಕಿ ಸಿಡಿಲು ಬಡಿದು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಅದೃಷ್ಟವಶಾತ್ ಕುರಿಗಾಯಿ ದೂರದಲ್ಲಿದ್ದದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಿನ್ನೆ ಕೂಡ ಮುಂಡಗೋಡು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿತ್ತು. ಇನ್ನು ಸಿದ್ದಾಪುರ ,ಹೊನ್ನಾವರ ಗಟ್ಟಭಾಗದಲ್ಲಿ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲೂ ನಿನ್ನೆಯಿಂದ ವರುಣ ಅಬ್ಬರಿಸುತಿದ್ದಾನೆ.
ತುಂಬ್ರಿ, ಹೊಳೆಬಾಗಿಲು, ನಿಟ್ಟೂರು,ಹೊಸನಗರ ಭಾಗದಲ್ಲಿ ಸಹ ಮಳೆಯಾಗಿದ್ದು ಇಂದು ಅಲ್ಲಲ್ಲಿ ತುಂತುರು ಮಳೆ ಬಿದ್ದಿದೆ.