ಹಿಜಾಬ್ ವಿವಾದ: ಸಾಧಕ,ಭಾದಕ ನೋಡಿ ತೀರ್ಮಾನ- ಡಾ.ಜಿ.ಪರಮೇಶ್ವರ್

84

ಮಂಗಳೂರು:-ಹಿಜಾಬ್ ನಿಷೇಧ ನಿರ್ಧಾರ ವಾಪಾಸು ಪಡೆಯುವ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕ್ಕೆ ಮಂಗಳೂರಿನಲ್ಲಿ ಗೃಹಸಚಿವ ಡಾ. ಜಿ ಪರಮೇಶ್ವರ್( home minister G. Parameshwar) ಪ್ರತಿಕ್ರಿಯಿಸಿದ್ದು ಬೊಮ್ಮಾಯಿಯವರೇ ನಾವು ಆದೇಶನೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಒಂದು ವೇಳೆ ಮಾಡಿದ್ರು ಸಹ ನಾವು ಅದನ್ನು ಪರಿಶೀಲನೆ ಮಾಡ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.ಸಾಧಕ ಭಾಧಕ ನೋಡಿಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ,ಗೊಂದಲ ಮಾಡುವ ಅವಶ್ಯಕತೆಯಿಲ್ಲ.

ಆ ಸಮುದಾಯವದವರು ಹಿಂದಿನಿಂದಲೂ ಸಹ ಹಿಜಾಬ್ ಹಾಕಿಕೊಂಡು ಬರ್ತಿದ್ದಾರೆ.ಇತ್ತಿಚೇಗಷ್ಟೇ ಬಿಜೆಪಿ ಸರ್ಕಾರ ಬಂದಾಗ ಅದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದೆ.

ಇದನ್ನೂ ಓದಿ:- ಸಿದ್ದರಾಮಯ್ಯ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ- ಸಂಸದ ಅನಂತಕುಮಾರ್ ಹೆಗಡೆ

ಸಂವಿಧಾನವನ್ನು ಬಿಟ್ಟು ನಾವು ಯಾವುದೇ ಕೆಲಸ ಮಾಡೋದಿಲ್ಲ,ಸಂವಿಧಾನದ ಚೌಕಟ್ಟಿನಲ್ಲಿ ಏನೇ ತೀರ್ಮಾನ ಮಾಡಿದ್ರು ಕೆಲವರಿಗೆ ನೋವಾಗಬಹುದು ಕೆಲವರಿಗೆ ಸಂತೋಷವಾಗಬಹುದು.ಆದ್ರೆ ಸಂವಿಧಾನದ ಚೌಕಟ್ಟಿನಲ್ಲಿ ಮಾತ್ರ ತೀರ್ಮಾನ ತೆಗೆದುಕೊಳ್ತೇವೆ ಎಂದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!