ಕಾರವಾರ :- ಮನೆಯಲ್ಲೇ ಕುಳಿತು ಕಾಲಹರಣ ಮಾಡುತಿದ್ದ ಅಣ್ಣನಿಗೆ ಕೆಲಸಕ್ಕೆ ಹೋಗುವಂತೆ ಬುದ್ದಿವಾದ ಹೇಳಿದಕ್ಕೆ ಕೋಪಗೊಂಡ ಅಣ್ಣ ತಮ್ಮನನ್ನೇ ಹೊಡೆದು ಕೊಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಅರ್ಜುನ ಶಂಕರ ಮೇಸ್ತ (23) ಕೊಲೆಯಾದ ವ್ಯಕ್ತಿಯಾಗಿದ್ದು ಕೃಷ್ಣ ಶಂಕರ ಮೇಸ್ತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಅಣ್ಣ-ತಮ್ಮನ ಮಧ್ಯೆ ಕೆಲಸದ ವಿಚಾರವಾಗಿ ಪ್ರತಿ ಭಾರಿ ಗಲಾಟೆ ನಡೆಯುತಿತ್ತು.ಆದರೇ ನಿನ್ನೆ ಸಂಜೆ ವೇಳೆ ಇಬ್ಬರಲ್ಲೂ ಅದು ತಾರಕಕ್ಕೆ ಏರಿದೆ. ಈವೇಳೆ ತಮ್ಮನ ತಲೆಗೆ ಅಣ್ಣ ಹೊಡೆದು ಕೊಲೆ ಮಾಡಿ ನಂತರ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಇನ್ನು ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಆರೋಪಿಗೆ ಕಾಲ್ ಮಾಡಿದ್ದಾಳೆ.ಈ ವೇಳೆ ಮೊಬೈಲ್ ಸ್ವಿಚ್ ಆಫ್ ಬಂದಿದ್ದರಿಂದ ಮನೆಯ ಬೀಗ ಮುರಿದು ಒಳಹೋಗಿ ನೋಡಿದಾಗ ಹತ್ಯೆ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಹೊನ್ನಾವರ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಂದು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಯಿತು.