ಹೊನ್ನಾವರ-ಆಟೋಚಾಲಕನಿಂದ ಮಹಿಳೆ ಬೆತ್ತಲೆ ಸ್ನಾನ ಮಾಡುವ ವಿಡಿಯೊ ವೈರಲ್-ಸಂತ್ರಸ್ತ ಮಹಿಳೆಯಿಂದ ದೂರು ದಾಖಲು.

5743

ಹೊನ್ನಾವರ :- ಮಹಿಳೆಯೊಬ್ಬಳು ನಗ್ನವಾಗಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಕುರಿತು ಸಂತ್ರಸ್ತ ಮಹಿಳೆಯು ಆಟೋ ಚಾಲಕ ಉಮೇಶ್ ಸಾರಂಗ್ ವಿರುದ್ಧ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಘಟನೆ ಏನು?
ಹೊನ್ನಾವರದ ಉಮೇಶ್ ಸಾರಂಗ್ ಎಂಬ ವ್ಯಕ್ತಿಯು ಸಂತ್ರಸ್ತ ಮಹಿಳೆಯೊಂದಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಲುಗೆ ಬೆಳಸಿಕೊಂಡಿದ್ದಾನೆ. ಈ ಸಲುಗೆ ಸಂಬಂದದ ರೂಪ ಪಡೆದು ಆಕೆ ತಾನು ಸ್ನಾನ ಮಾಡುವ ವಿಡಿಯೋ ವನ್ನು ಆತ ಕೇಳಿದ್ದರಿಂದ ಕಳುಹಿಸಿಕೊಟ್ಟಿದ್ದಾಳೆ.
ಇನ್ನು ಈಕೆ ವಿವಾಹಿತೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ತಾನು ಮಾಡಿದ ತಪ್ಪಿನ ಅರಿವಾಗಿ ಈಕೆ ಆತನೊಂದಿಗೆ ಸಂಪರ್ಕ ವನ್ನು ಬಿಟ್ಟಿದ್ದಾಳೆ. ಇದರಿಂದ ಕುಪಿತನಾದ ಈತ ಆಕೆಯು ಸ್ನಾನ ಮಾಡುವ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ.

ವಿಡಿಯೋ ವೈರಲ್ ಮಾಡಿದ ಆರೋಪಿ

ಈ ವಿಡಿಯೋ ಹಲವು ವಾಟ್ಸ್ ಅಪ್ ಗ್ರೂಪ್ ನಲ್ಲಿ ಹರಿದಾಡಿದೆ. ಕೊನೆಗೆ ಈಕೆಯ ಗಂಡನ ಮೊಬೈಲ್ ಗೂ ಈ ವಿಡಿಯೊ ಬಂದಿದ್ದು ನಂತರ ಆಕೆಯ ಗಮನಕ್ಕೆ ಬಂದಿದೆ.
ಈ ಕುರಿತು ಮಹಿಳೆ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ಸಂತ್ರಸ್ತ ಮಹಿಳೆ.

ಇನ್ನು ತಾನು ಮಾಡಿದ ತಪ್ಪಿನಿಂದ ಮನನೊಂದ ಮಹಿಳೆ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಮನೆಯವರು ಈಕೆಯನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದರು. ಇನ್ನು ವಿಷಯದ ಗಂಭೀರತೆಯನ್ನು ಅರಿತ ಪೊಲೀಸರು ಮಹಿಳೆಗೆ ಸಾಂತ್ವನ ಹೇಳಿ ಎಲ್ಲವನ್ನೂ ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ.
ಆದರೇ ಈಕೆಯ ವಿಡಿಯೋ ಇದೀಗ ಹೊನ್ನಾವರದಲ್ಲಿ ಹರಿದಾಡುತಿದ್ದು, ಆಟೋ ಚಾಲಕ ಉಮೇಶ ಸಾರಂಗ್ ಮಾಡಿದ ತಪ್ಪಿನಿಂದಾಗಿ ಇಡೀ ಕುಟುಂಬ ತಲೆಎತ್ತದಂತೆ ಮಾಡಿದೆ.ಹೀಗಾಗಿ ಈತನ ಕೆಟ್ಟತನ ದಿಂದ ಒಂದು ಕುಟುಂಬವೇ ಹಾಳಾಗುವಂತಾಗಿದೆ. ಹೀಗಾಗಿ ಈತನ ವಿರುದ್ಧ ಕಠಿಣ ಕ್ರಮ ವನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸರಿಗೆ ಕುಟುಂಬದವರು ಮನವಿ ಮಾಡಿದ್ದಾರೆ.

ಬಿಜೆಪಿಯ ಕಾರ್ಯಕರ್ತ!
ಕೃತ್ಯವೆಸಗಿದ ಉಮೇಶ ಸಾರಂಗ್ ತಾನೊಬ್ಬ ಸಮಾಜ ಸೇವಕ ಎಂದು ತನ್ನನ್ನು ಬಿಂಬಿಸಿಕೊಂಡಿದ್ದ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ಕೆಲವು ಹುದ್ದೆಯನ್ನು ಸಹ ಅಲಂಕರಿಸಿದ್ದ ಎಂದು ಹೇಳಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!