Astrology|ದಿನಭವಿಷ್ಯ 07-02-2023

74

ಪಂಚಾಂಗ (Panchanga)
ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಕೃಷ್ಣ,
ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಮಘಾ, ಯೋಗ : ಶೋಭನ, ಕರಣ : ತೈತಿಲ,

ಕಾಲ (time)
ಸೂರ್ಯೋದಯ ಬೆಳಗ್ಗೆ 07 ಗಂಟೆ, ಸೂರ್ಯಾಸ್ತ ಸಂಜೆ 06 ಗಂಟೆ 33 ನಿಮಿಷಕ್ಕೆ. ರಾಹು ಕಾಲ 03:40 – 05:07, ಯಮಘಂಡ ಕಾಲ 09:54 ರಿಂದ 11 : 20, ಗುಳಿಕ ಕಾಲ 12:47 ರಿಂದ 2: 13.

ಹವಾಮಾನ
ಬಿಸಿಲು ಶೀತಗಾಳಿ ಇರಲಿದ್ದು ಚಳಿಯ ಪ್ರಮಾಣ ಕಡಿಮೆ ಇರಲಿದೆ.

ರಾಶಿಭವಿಷ್ಯ (Rashipala )

ಮೇಷ: ಕಾರ್ಯದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ವ್ಯವಹಾರದಲ್ಲಿ ನಷ್ಟವಿರುವುದು,ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ,ಆರೋಗ್ಯ ಸುಧಾರಣೆ,ಮಕ್ಕಳಿಗೆ ಅಭಿವೃದ್ಧಿ.

ವೃಷಭ: ಆರೋಗ್ಯದಲ್ಲಿವ್ಯತ್ಯಾಸ, ಹಣವ್ಯಯ,ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಇಂದು ಲಾಭವು ಆಗಲಿದೆ. ಕೈಗೊಂಡ ಕಾರ್ಯಗಳಲ್ಲಿ ಸಫಲತೆಯನ್ನು ಅನುಭವಿಸುವಿರಿ. ಹಣದ ಒಳ ಅರಿವು ಮಂದಗತಿಯಲ್ಲಿ ಇರುತ್ತದೆ. ಕೃಷಿಕರಿಗೆ ಅಲ್ಪ ಚೇತರಿಕೆ.

ಮಿಥುನ: ಆರೋಗ್ಯ ಮಧ್ಯಮ ,ಶೀತ ಬಾಧೆ,ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಯಸ್ಸು,ಕೋಪದಿಂದ ಯಾವ ಕಾರ್ಯ ಸಾಧನೆಗಳು ನಿಮ್ಮಿಂದ ಆಗದು. ಎಲೆಕ್ಟ್ರಾನಿಕ್ ಸಂವಹನ ಕ್ಷೇತ್ರದಲ್ಲಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ದೂರ ಪ್ರಯಾಣ,ಮಿಶ್ರಫಲ.

ಕರ್ಕ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ,ವಿದ್ಯಾರ್ಥಿಗಳಲ್ಲಿ ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ , ಕಲಾವಿದರಿಗೆ ಯಶಸ್ಸು ದೊರೆಯಲಿದೆ. ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಮೀನುಗಾರರಿಗೆ ಲಾಭ,ಕೃಷಿಉತ್ಪನ್ನದಾರರಿಗೆ ಅಭಿವೃದ್ಧಿ.

ಸಿಂಹ: ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿಯಾಗಲಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಷ್ಟ,ಬಂಧು ಗಳಲ್ಲಿ ಕಲಹ,ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ,ಅವಿವಾಹಿತರಿಗೆ ವಿವಾಹ ಯೋಗವು ಬರಲಿದೆ.

ಕನ್ಯಾ: ಗೃಹ ಉಪಯೋಗಿ ವಸ್ತುಗಳ ಸಂಗ್ರಹವನ್ನು ಮಾಡಲಿದ್ದೀರಿ. ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದಾಂಪತ್ಯದಲ್ಲಿ ಸುಖವು ಇರಲಿದೆ, ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿಯನ್ನು ವಹಿಸಬೇಕಾದೀತು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರಗತಿಯು ಆಗಲಿದೆ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ನಿರೀಕ್ಷಿತ ಸ್ಥಾನಮಾನಕ್ಕೆ ಹೆಚ್ಚಿನ ಶ್ರಮ, ತಪ್ಪು ತಿಳುವಳಿಕೆಯಿಂದ ಸಂಬಂಧ ಕೊನೆಗೊಳ್ಳುವ ಸಾಧ್ಯತೆ . ಸಂಗಾತಿಯೊಂದಿಗೆ ಕಾಲ ಕಳೆಯಲಿದ್ದೀರಿ. ಅತಿಯಾದ ಕಾರ್ಯಗಳಿಂದ ಸುಸ್ತಾಗಬಹುದು. ವ್ಯವಹಾರ ವಿಷಯದಲ್ಲಿ ನಿಮ್ಮನ್ನು ಹೆಚ್ಚು ಸಮಯ ಕಾಯುವಂತೆ ಮಾಡುತ್ತದೆ.

ವೃಶ್ಚಿಕ: ಕಾರ್ಯ ವಿಳಂಬ,ಆರೋಗ್ಯದಲ್ಲಿ ವ್ಯತ್ಯಾಸ,ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ,ಸಹೋದ್ಯೋಗಿ ಹಾಗೂ ಸಂಬಂಧಿಕರ ಬೆಂಬಲವನ್ನು ನೀವು ಪಡೆಯಬಹುದು,ಹಣವ್ಯಯ.

ಧನುಸ್ಸು:ಕಾರ್ಯ ಸಾಧನೆ, ಆರೋಗ್ಯ ಉತ್ತಮ,ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು,ವಿದ್ಯಾರ್ಥಿಗಳಿಗೆ ಉತ್ತಮ ದಿನ, ಕೃಷಿ ಕ್ಷೇತ್ರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು, ದಾಂಪತ್ಯ ಜೀವನದಲ್ಲಿ ವಿರಸ,ಮಿಶ್ರ ಫಲ.

ಮಕರ: ಮಕ್ಕಳ ಭವಿಷ್ಯದ ಚಿಂತೆ. ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ. ಸಂಗಾತಿಯೊಂದಿಗೆ ತಾಳ್ಮೆಂದಿರಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಗಟ್ಟಿತನವೇ ನಿಮಗೆ ಧೈರ್ಯ ಕೊಡಲಿದೆ. ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಉದ್ಯೋಗಿಗಳು ಹಣ ಹೂಡಿಕೆ ಮಾಡಿದರೆ ನಷ್ಟವನ್ನು ಅನುಭವಿಸಬೇಕಾದೀತು. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ.

ಕುಂಭ: ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸಬಹುದು. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲಕರ ದಿನ. ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಿ,ಆಲಸ್ಯ ಕಾಡುವುದು,ಶೀತ ಭಾದೆ ಇರಲಿದೆ.

ಮೀನ: ಯತ್ನ ಕಾರ್ಯ ಸಫಲ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಹಣವ್ಯಯ,ಮಕ್ಕಳ ಆರೋಗ್ಯದ ವಿಷಯದಲ್ಲಿ ತೊಂದರೆ,ಪಾಲುದಾರಿಕೆಯಲ್ಲಿ ನಷ್ಟ,ಉದ್ಯೋಗದಲ್ಲಿ ಸಮಸ್ಯೆ,ಕೃಷಿಕರಿಗೆ ಅಲ್ಪ ಅಭಿವೃದ್ಧಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!