ಹುಬ್ಬಳ್ಳಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಈ ಬಾರಿ ಮೂರು ದಿನಗಳ ಕಾಲ ಗಣೇಶ ಚತುರ್ಥಿ ನಡೆಸಲು ಹುಬ್ಬಳ್ಳಿ ಮಹಾನಗರ ಪಾಲಿಕೆ ಅನುಮತಿ ನೀಡಿದೆ.
ಈ ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ
ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ನೇಸಲು ನಾಲ್ಕೂ ಮನವಿ ಬಂದಿದ್ದವು. ಅವುಗಳಲ್ಲಿ ಗಜಾನನ ಮಹಾ ಮಂಡಳಿ, ಶ್ರೀರಾಮ ಸೇನೆ, ರಾಣಿ ಚನ್ನಮ್ಮ ಗಜಾನನ ಉತ್ಸವ ಸಮಿತಿ ಹಾಗೂ ರಣಿ ಚನ್ನಮ್ಮ ಉತ್ಸವ ಸಮಿತಿಯಿಂದ ಮನವಿ ಬಂದಿತ್ತು.
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿತ್ತು, ಕಳೆದ ವರ್ಷ ಎಷ್ಟು ದಿನ ಗಣೇಶ ಚತುರ್ಥಿ ಮಾಡಿದ್ದರೋ, ಅಷ್ಟೇ ದಿನ ಮಾಡಲು ಅವಕಾಶ ನೀಡಬೇಕು ಎಂದು ಅನುಮತಿ ನೀಡಲಾಗಿದೆ ಎಂದರು.
ಇದನ್ನೂ ಓದಿ:-
ನಗರದ ಗಜಾನನ ಗಣೇಶ ಉತ್ಸವ ಸಮಿತಿಗೆ ಕಳೆದ ಬಾರಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು,ಈ ಬಾರಿ ಕೂಡಾ ಈ ಸಮಿತಿಗೆ ಅವಕಾಶ ಮಾಡಿ ಕೊಡಲು ನಿರ್ಧಾರ ಮಾಡಲಾಗಿದೆ ಎಂದ ಅವರು, ಪ್ರತಿ ವರ್ಷವೂ ಇದೇ ರೀತಿ ಗಣೇಶ ಹಬ್ಬಕ್ಕೆ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಮಾಡಲು ಪಾಲಿಕೆ ಠರಾವ್ ಪಾಸ್ ಮಾಡಲಾಗಿದೆ, ಇದನ್ನ ಜಿಲ್ಲಾಧಿಕಾರಿ ಗಮನಕ್ಕೆ ತಂದು, ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು,ಅದೇ ರೀತಿ ಜನ ಪ್ರತಿನಿಧಿಗಳ ಜೊತೆ ಕೂಡಾ ಚರ್ಚೆ ಮಾಡಿ ಸೂಕ್ತ ಕ್ರಮ ವಹಿಸುತ್ತೆವೆ ಎಂದರು.