ಕಾರವಾರ:- ಕರೋನಾ ಲಾಕ್ ಡೌನ್ ಸಂದರ್ಭವನ್ನು ಬಳಸಿಕೊಂಡು ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸರು ಮಾಲು ಸಮೇತ ಬಂಧಿಸಿದ ಘಟನೆ ಇಂದು ನಡೆದಿದೆ.
ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆದಗಿಫಾಲ್ಸ್ ನ ಮನೆಯಲ್ಲಿ ವೆಂಕಟೇಶ್ ನಾಯ್ಕ ಮರಾಠ ಎಂಬಾತನೇ ಅಕ್ರಮ ಕಳ್ಳಬಟ್ಟಿ ಸರಾಯಿ ತಯಾರಿಸಿ ಮಾರಾಟ ಮಾಡುತಿದ್ದವನಾಗಿದ್ದು ಈತನನ್ನು ವಶಕ್ಕೆ ಪಡೆದು 16000₹ ಮೌಲ್ಯದ ನಾಲ್ಕು ಲೀಟರ್ ಮದ್ಯ ಇದಕ್ಕೆ ತಯಾರಿಸಲು ಬೇಕಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯಲ್ಲಿ ಕುಮಟಾ ಸಿಪಿಐ ಶಿವಪ್ರಕಾಶ್ ನಾಯ್ಕ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದು ಕರ್ನಾಟಕ ಅಬಕಾರಿ ಕಯ್ದೆಯಡಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.