BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆ|ಮಧ್ಯಪ್ರದೇಶವನ್ನು ಹಿಂದಿಕ್ಕಲಿರುವ ಕರ್ನಾಟಕ.

138

ಬೆಂಗಳೂರು:- 2018ರಲ್ಲಿ ನಡೆದ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 524 ಹುಲಿಗಳಿದ್ದವು. ಮಧ್ಯಪ್ರದೇಶದಲ್ಲಿ 526 ಹುಲಿಗಳು ಪತ್ತೆಯಾಗಿದ್ದವು. ಆ ಮೂಲಕ ದೇಶದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಎಂಬ ಪಟ್ಟ ಮಧ್ಯಪ್ರದೇಶದ ಪಾಲಾಗಿತ್ತು. ಈ ಬಾರಿ ಕರ್ನಾಟಕವು ಇದನ್ನು ಮೀರಿ ನಂ. 1 ಸ್ಥಾನಕ್ಕೆ ಏರುವ ಸಾಧ್ಯತೆಗಳಿವೆ. ಪ್ರಸ್ತುತ ಕೆಮರಾ ಕಣ್ಣಿಗೆ ಬಿದ್ದಿರುವ ಹುಲಿಗಳ ಪೈಕಿ ಯೌವನಾವಸ್ಥೆಯವುಗಳೇ ಹೆಚ್ಚಿದ್ದು ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ತಡದ ಪ್ರದೇಶಗಲ್ಲಿ ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಪ್ರತೀ ವರ್ಷ ಜು. 29ರಂದು ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹುಲಿ ಗಣತಿ ವಿವರ ಬಿಡುಗಡೆ ಮಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್‌ಟಿಸಿಎ)ದ ಮಾರ್ಗಸೂಚಿ ಅನ್ವಯ ರಾಜ್ಯದ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಿದ್ದು, ಈ ಗಣತಿಗೆ ಕೆಮರಾ ಟ್ರ್ಯಾಪ್‌ ಮತ್ತು ಲೈನ್‌ ಟ್ರಾನ್‌ಸ್ಟಾ éಕ್ಟ್ ವಿಧಾನ ಅನುಸರಿಸಲಾಗಿದೆ ಎಂದರು.

ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಉತ್ತರ ಕನ್ನಡ ಜಿಲ್ಲೆಯ ಕಾಳಿ ಕಾನನ ಸೇರಿ 37 ವನ್ಯಜೀವಿ ಧಾಮಗಳಲ್ಲಿ 4,786 ಹಾಗೂ ಸಂರಕ್ಷಿತ ಅರಣ್ಯಗಳಲ್ಲಿ ಸೇರಿ ಒಟ್ಟು 5,399 ಕೆಮರಾಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ 66.86 ಲಕ್ಷಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ದಾಖಲಾಗಿದೆ. ಇದನ್ನೂ ಓದಿ:-ಉತ್ತರ ಕನ್ನಡದಲ್ಲಿ ಮಳೆ ಅಬ್ಬರ|ದೋಣಿ ಮೂಲಕ ರಕ್ಷಣೆ

ಇವುಗಳ ಪೈಕಿ 71 ಮರಿಗಳ ಸಹಿತ 435 ಹುಲಿಗಳು ಇದ್ದು, ಅವುಗಳ ಚಲನವಲನ, ಪ್ರಾದೇಶಿಕ ಪರಿಮಿತಿ, ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಸಂಖ್ಯೆ ಗುರುತಿಸಲಾಗಿದೆ. ಇದಲ್ಲದೆ ಹುಲಿಗಳ ಮಲ, ಮೂತ್ರ, ಹೆಜ್ಜೆಗುರುತು ಮತ್ತಿತರ ವಿಧಾನಗಳಿಂದ ನಡೆಸಿರುವ ಗಣತಿ ಹಾಗೂ ಕೇಂದ್ರ ಸರಕಾರ ಬಿಡುಗಡೆ ಮಾಡುವ ಗಣತಿಗಳ ಆಧಾರದಲ್ಲಿ ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 600ನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ ಎಂದು ಅರಣ್ಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!