ದಾಖಲೆ ಮಟ್ಟಕ್ಕೇರಿದ ಕಚ್ಚಾತೈಲ-ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಸಾಧ್ಯತೆ.

157

ನವದೆಹಲಿ :- ಚುನಾವಣೆ ಸಂದರ್ಭವಾದ್ದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಸಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಆದ್ರೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.( International crude oil market)

ಪ್ರತಿ ಬ್ಯಾರೆಲ್ ಗೆ 90 ಡಾಲರ್ ದಾಟಿದ್ದು, (dollar) ಇದರಿಂದಾಗಿ ಭಾರತ ಸೇರಿದಂತೆ ಏಷ್ಯಾ ದೇಶಗಳ ಹಣದುಬ್ಬರ (Finance )ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುವ ಸಂಭವ ಇದೆ ಎಂದು ವಿಶ್ಲೇಷಕರು ಮಾಹಿತಿ ನೀಡಿದ್ದಾರೆ.

ಈ ವರ್ಷದ ಜನವರಿಯಿಂದ ಕಚ್ಚಾ ತೈಲ ದರ ಶೇ. 30 ರಷ್ಟು ಹೆಚ್ಚಳವಾಗಿದ್ದು, ಬ್ಯಾರೆಲ್ ಗೆ 90 ಡಾಲರ್ ದಾಟಿದೆ. ಮಂಗಳವಾರ WTI ಕಚ್ಚಾತೈಲ ದರ ಶೇಕಡ 1.06ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಗೆ 92.54 ಡಾಲರ್ ನಲ್ಲಿ ವಹಿವಾಟು ನಡೆಸಿದೆ.

ಬ್ರೆಂಟ್ ಕಚ್ಚಾ ತೈಲ ದರ ಶೇಕಡ 0.63 ರಷ್ಟು ಹೆಚ್ಚಳವಾಗಿದ್ದು ಪ್ರತಿ ಬ್ಯಾರೆಲ್ ಗೆ 93.91 ಡಾಲರ್ ಗೆ ತಲುಪಿದೆ.

ಭಾರತ (Bharath) ವಿಶ್ವದಲ್ಲೇ ಕಚ್ಚಾ ತೈಲು (Crude oil)ಆಮದುವಿನಲ್ಲಿ ಮೂರನೇ ದೊಡ್ಡ ದೇಶವಾಗಿದೆ. ತೈಲದರದಲ್ಲಿ 10 ಡಾಲರ್ ಏರಿಕೆ ಆದರೆ ಭಾರತದ ಚಾಲ್ತಿ ಖಾತೆಯ ವಿತ್ತೀಯ ಕೊರತೆಯನ್ನು ಶೇಕಡ 0.2ರಷ್ಟು ಹೆಚ್ಚಿಸುತ್ತದೆ. ತೈಲ ದರ 90 ಡಾಲರ್ ದಾಟಿದ್ದು, ಈ ಟ್ರೆಂಡ್ ಮುಂದುವರೆದರೆ ತೈಲ ಕಂಪನಿಗಳಿಗೆ ನಷ್ಟದ ಪ್ರಮಾಣ ಹೆಚ್ಚಾಗುವುದರಿಂದ ಅನಿವಾರ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಾಣಲಿದೆ.( Petrol diesel rate)
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!