ನವದೆಹಲಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ.
ಕೇಂದ್ರ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್ಗೆ 9.50 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ಗೆ 6 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಪರಿಸ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಅಲ್ಲದೇ ಅಡುಗೆ ಸಿಲಿಂಡರ್ ದರ 200 ರೂ. ಕಡಿತ ಮಾಡಲಾಗಿದೆ.
ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 5 ರಂದು ಪೆಟ್ರೋಲ್ ಮೇಲೆ 5 ರೂ. ಡಿಸೇಲ್ ಮೇಲೆ 10 ರೂಪಾಯಿ ಇಳಿಕೆ ಮಾಡಿತ್ತು. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಬೆಲೆ ಇಳಿಕೆ ಮಾಡಿತ್ತು. ಈಗ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ಮುನ್ನ ಬೆಲೆ ಇಳಿಕೆ ಮಾಡಿದೆ. ಈ ಬಾರಿ ಎಲ್ಪಿಜಿಗೂ ಸಬ್ಸಿಡಿ ನೀಡಿದೆ.
ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೇಕಾಗುವ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನೂ ಇಳಿಕೆ ಮಾಡಲಾಗಿದೆ. ಉಕ್ಕಿನ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕವನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರ ಕೂಡ ಅಬಕಾರಿ ಸುಂಕ ಕಡಿಮೆ ಮಾಡಿದರೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಮತ್ತಷ್ಟು ಕಡಿಮೆ ಆಗುತ್ತೆ. ಆದರೆ ರಾಜ್ಯ ಸರ್ಕಾರ ಯಾವಾಗ ಕಡಿಮೆ ಮಾಡುವ ನಿರ್ಧಾರ ಮಾಡುತ್ತೋ ಅನ್ನೋದನ್ನ ಕಾದು ನೋಡಬೇಕಿದೆ.