ನ್ಯೂಸ್ ಡೆಸ್ಕ್ : ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್ ಇಂದು ತಮಿಳುನಾಡಿನ ಕೂನೂರಿನ ಸಮೀಪ ಪತನಗೊಂಡಿದೆ. ರಾವತ್ ಸೇರಿದಂತೆ 13 ಮಂದಿ ಮೃತಪಟ್ಟಿರುವುದಾಗಿ ವಾಯುಪಡೆ ಖಚಿತಪಡಿಸಿದೆ.
ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಅತ್ಯಾಧುನಿಕ ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು 2012ರಿಂದ ಬಳಸಲಾಗುತ್ತಿದೆ. ರಾತ್ರಿ ಸಂಚಾರಕ್ಕೆ ಸಹಕಾರಿಯಾಗಬಹುದಾದ ನೈಟ್ ವಿಷನ್ ಸಾಧನ ಹಾಗೂ ವಾತಾವರಣದ ಕುರಿತು ಮಾಹಿತಿ ಪಡೆಯುವ ವೆದರ್ ರಡಾರ್ ಅನ್ನು ಈ ಹೆಲಿಕಾಪ್ಟರ್ ಒಳಗೊಂಡಿದೆ. ಆದರೆ, ಹೆಲಿಕಾಪ್ಟರ್ ಪತನವಾಗಲು ನಿಖರ ಕಾರಣ ತಿಳಿದು ಬಂದಿಲ್ಲ ಹೀಗಿರುವಾಗ ಈ ಹೆಲಿಕಾಪ್ಟರ್ ಸಾಮರ್ಥ್ಯ ಏನು ಯಾಕೆ ಅಪಘಾತವಾಯಿತು ಹೀಗೆ ಹತ್ತು ಹಲವು ಪ್ರಶ್ನೆಗಳು ಏಳತೊಡಗಿದೆ.

ಹೆಲಿಕಾಪ್ಟರ್ ಹಾರಾಟ ನಡೆಸಿದ್ದ ಮಾರ್ಗದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ ಸಂಚಾರ ಮಾರ್ಗದ ಗೋಚರತೆಯಲ್ಲಿ ಉಂಟಾಗಿರುವ ಅಸ್ಪಷ್ಟತೆಯಿಂದ ಅಪಘಾತ ಸಂಭವಿಸಿರಬಹುದು ಎಂದು ತಜ್ಞರು ಹೇಳುತ್ತಾರೆ. ಪ್ರತ್ಯಕ್ಷ ದರ್ಶಿಯೊಬ್ಬರು ಹೇಳುವಂತೆ ಮೊದಲು ಒಂದು ಮರಕ್ಕೆ ಡಿಕ್ಕಿ ಹೊಡೆದು ನಂತರ ಇನ್ನೊಂದು ಮರಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಅಪಘಾತವಾಯಿತು ಎನ್ನುತಿದ್ದಾರೆ. ಆದರೇ ಹೆಲಿಕಾಪ್ಟರ್ ಸಾಮರ್ಥ್ಯ ನೋಡಿದರೆ ಹಲವು ಅನುಮಾನ ಮೂಡುವಂತಿದೆ.ಅಷ್ಟಕ್ಕೂ ಈ ಹೆಲಿಕಾಪ್ಟರ್ ಸಾಮರ್ಥ್ಯ ಏನು ಎನ್ನುವ ವಿವರ ಇಲ್ಲಿದೆ.
ಎಂಐ–17ವಿ5 ಹೆಲಿಕಾಪ್ಟರ್ ಒಟ್ಟು ಗರಿಷ್ಠ 13,000 ಕೆ.ಜಿ. ತೂಕವನ್ನು ಹೊತ್ತು ಸಂಚರಿಸಬಹುದಾಗಿದೆ. ಗರಿಷ್ಠ 4,000 ಕೆ.ಜಿ.ಯಷ್ಟು ಪೇಲೋಡ್ ಒಯ್ಯುತ್ತದೆ. ಇದರಲ್ಲಿ ಪಿಕೆವಿ–8 ಆಟೊಪೈಲಟ್ ವ್ಯವಸ್ಥೆ ಮತ್ತು ಸಂಪರ್ಕ, ಮಾರ್ಗಸೂಚಿ ವ್ಯವಸ್ಥೆ ಸೇರಿದಂತೆ ಹೆಲಿಕಾಪ್ಟರ್‌ನ ಹತ್ತಾರು ವ್ಯವಸ್ಥೆಗಳ ನಿಯಂತ್ರಣ ಹಾಗೂ ನಿಗಾ ವಹಿಸುವ ಕೆಎನ್‌ಇಐ–8 ಏವಿಯಾನಿಕ್ಸ್ ಸ್ಯೂಟ್ ಇದೆ.
ವಿಪತ್ತು ನಿರ್ವಹಣೆ ಕಾರ್ಯಾಚರಣೆಗಳಲ್ಲಿ ಮತ್ತು ಸಾಗಣೆ ಕಾರ್ಯಗಳಲ್ಲಿ ಹೆಲಿಕಾಪ್ಟರ್ ಬಲವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು 2008ರಲ್ಲಿ ರಷ್ಯಾದೊಂದಿಗೆ ಎಂಭತ್ತು ‘ಎಂಐ–17ವಿ5’ಗಾಗಿ ಒಪ್ಪಂದ ಮಾಡಿಕೊಂಡಿತ್ತು.
ನಂತರದಲ್ಲಿ ಒಪ್ಪಂದವನ್ನು ವಿಸ್ತರಿಸುವ ಮೂಲಕ ಒಟ್ಟು 151 ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು ತರಿಸಿಕೊಳ್ಳಲು ಭಾರತ ಮುಂದಾಯಿತು. 2011ರ ಸೆಪ್ಟೆಂಬರ್‌ನಲ್ಲಿ ಮೊದಲ ಬ್ಯಾಚ್‌ನ ಹೆಲಿಕಾಪ್ಟರ್‌ಗಳು ದೇಶಕ್ಕೆ ಬಂದಿಳಿದವು.
ಸೇನಾ ಸಿಬ್ಬಂದಿಯನ್ನು ಹೊತ್ತು ಸಾಗಲು ಮತ್ತು ಎತ್ತರ ಪ್ರದೇಶಗಳಿಗೆ ಅಗತ್ಯ ಸರಕು ಸಾಗಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು 2012ರ ಫೆಬ್ರುವರಿಯಲ್ಲಿ ಅಧಿಕೃತವಾಗಿ ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು ಬಳಕೆಗೆ ನಿಯೋಜಿಸಿಕೊಂಡಿತು. ಕ್ಷಿಪಣಿಗಳಿಂದ ರಕ್ಷಣೆ ಪಡೆಯುವ ಸ್ವರಕ್ಷಣಾ ವ್ಯವಸ್ಥೆಯನ್ನು ಈ ಹೆಲಿಕಾಪ್ಟರ್‌ಗಳಿಗೆ ಅಳವಡಿಸಲಾಗಿದೆ.
ಸೇನಾ ಪಡೆಗಳಲ್ಲಿ ಬಳಸಲಾಗುವ ಎಂಐ–17ವಿ5 ಹೆಲಿಕಾಪ್ಟರ್‌ಗಳಲ್ಲಿ ಸಿಬ್ಬಂದಿ, ಸರಕು ಮತ್ತು ಸಾಮಗ್ರಿಗಳನ್ನು ರವಾನಿಸಲು ಉಪಯೋಗಿಸಲಾಗುತ್ತಿದೆ. ಇದರೊಂದಿಗೆ ನೆಲದ ಮೇಲಿನ ಗುರಿಯನ್ನು ದ್ವಂಸ ಮಾಡಲು, ಗಾಯಾಳುಗಳನ್ನು ಸಾಗಿಸಲು, ಆಕಾಶ ಮಾರ್ಗದಿಂದಲೇ ಸೇನಾ ಸಿಬ್ಬಂದಿಯನ್ನು ಕೆಳಗಿಳಿಸಲು ಸೇರಿದಂತೆ ವಿಶೇಷ ಕಾರ್ಯಾಚರಣೆಗಳಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಬಳಸಬಹುದಾಗಿದೆ.
ಕಂಪನಿಯ ಪ್ರಕಾರ, ಈ ಹೆಲಿಕಾಪ್ಟರ್ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ ಅತ್ಯಾಧುನಿಕ ಟಿವಿ3–117ವಿಎಂ (TV3-117VM) ಎಂಜಿನ್ ಅಳವಡಿಸಲಾಗಿದೆ.
ಎಂಐ–8/17 ವರ್ಗದ ಹೆಲಿಕಾಪ್ಟರ್‌ಗಳ ಪೈಕಿ ಎಂಐ–17ವಿ5 ತಾಂತ್ರಿಕವಾಗಿ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಹೆಲಿಕಾಪ್ಟರ್ ಇದಾಗಿದೆ.
Mi-17V5 ಹೆಲಿಕಾಪ್ಟರ್ ಪ್ರಮುಖ ಮಾಹಿತಿ ಹೀಗಿದೆ.

ರಷ್ಯಾ ನಿರ್ಮಿತ ಎಂಐ–17ವಿ5 ಹೆಲಿಕಾಪ್ಟರ್ ಅನ್ನು ಕಜಾನ್ ಹೆಲಿಕಾಫ್ಟರ್ಸ್ ತಯಾರಿಸುತ್ತದೆ.
2012ರ ಫೆಬ್ರುವರಿ 17ರಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ಎಂಐ–8/17 ವರ್ಗದ ಹೆಲಿಕಾಪ್ಟರ್ ಸರಕು, ಸಿಬ್ಬಂದಿ ಪ್ರಯಾಣಿಸಲು ಇದರ ಬಳಕೆ ಮಾಡಲಾಗುತ್ತದೆ.
ತಾಂತ್ರಿಕವಾಗಿ ಅತ್ಯಾಧುನಿಕ ವ್ಯವಸ್ಥೆ ಒಳಗೊಂಡಿರುವ ಹೆಲಿಕಾಪ್ಟರ್ ಇದಾಗಿದ್ದು
ಗರಿಷ್ಠ 13,000 ಕೆ.ಜಿ. ತೂಕವನ್ನು ಹೊತ್ತು ಸಂಚರಿಸಬಹುದಾಗಿದೆ.ಶಸ್ತ್ರಸಜ್ಜಿತರಾದ 36 ಯೋಧರನ್ನು ಅಥವಾ 4,000 ಕೆ.ಜಿ.ಯಷ್ಟು ತೂಕವನ್ನು ಹೆಲಿಕಾಪ್ಟರ್ ತಳಭಾಗದಲ್ಲಿ ಹೊತ್ತು ಒಯ್ಯುತ್ತದೆ.ಪಿಕೆವಿ–8 ಆಟೊಪೈಲಟ್ ವ್ಯವಸ್ಥೆ, ಮಾರ್ಗಸೂಚಿ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಡಿಸ್‌ಪ್ಲೇಗಾಗಿ ಕೆಎನ್‌ಇಐ–8 ಏವಿಯಾನಿಕ್ಸ್ ಸ್ಯೂಟ್ ಅಳವಡಿಸಲಾಗಿದೆ.ಹೆಲಿಕಾಪ್ಟರ್‌ನ ಕ್ಯಾಬಿನ್ ಒಳಗೆ ಮತ್ತು ಕೆಳಗೆ ತೂಗಾಡುವ ರೀತಿಯಲ್ಲಿ ಸರಕು–ಸಾಮಾಗ್ರಿಗಳನ್ನು ಹೊತ್ತೊಯ್ಯುತ್ತದೆ. ಇದು ಜಗತ್ತಿನ ಅತ್ಯಾಧುನಿಕ ಸರಕು ಸಾಗಣೆಯ ಹೆಲಿಕಾಪ್ಟರ್ ಆಗಿದೆ.ಸೇನಾ ಪಡೆಗಳ ಸಿಬ್ಬಂದಿ ರವಾನೆಗೆ, ಶಸ್ತ್ರಾಸ್ತ್ರಗಳನ್ನು ಸಾಗಿಸಲು, ಅಗ್ನಿ ತುರ್ತು ಸಂದರ್ಭಗಳಲ್ಲಿ ರಕ್ಷಣೆಗಾಗಿ, ಭದ್ರತೆ ಮತ್ತು ಗಸ್ತು ತಿರುಗಲು ಹಾಗೂ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಗಳಿಗಾಗಿ ಈ ಹೆಲಿಕಾಪ್ಟರ್ ಬಳಕೆ ಮಾಡಬಹುದಾಗಿದೆ.
2008ರಲ್ಲಿ ಭಾರತ ಮತ್ತು ರಷ್ಯಾದ ‘ರೊಸೊಬೊರೊನ್‌ಎಕ್ಸ್‌ಪೋರ್ಟ್’ ಕಂಪನಿಯೊಂದಿಗೆ ಒಪ್ಪಂದವಾದ ನಂತರ 80 ಎಂಐ–17ವಿ5 ಹೆಲಿಕಾಪ್ಟರ್‌ಗಳ ಪೂರೈಕೆಗೆ ಬೇಡಿಕೆ ಇಡಲಾಗಿತ್ತು. 2011ರಿಂದ 2013ರ ನಡುವೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಬಂದಿಳಿದವು.
ಭಾರತೀಯ ವಾಯುಪಡೆ, ಗೃಹ ಸಚಿವಾಲಯ ಹಾಗೂ ಪ್ರಧಾನ ಮಂತ್ರಿ ಕಚೇರಿಯ ಅಗತ್ಯಗಳಿಗಾಗಿ ಮತ್ತೆ 71 ಹೆಲಿಕಾಪ್ಟರ್‌ಗಳ ಪೂರೈಕೆ ಒಪ್ಪಂದ ಏರ್ಪಟ್ಟಿತು. 2012ರಿಂದ 2013ರ ನಡುವೆ ಹೆಚ್ಚುವರಿ ಪೂರೈಕೆಗೆ ಬೇಡಿಕೆ ಇಡಲಾಗಿತ್ತು. ರೊಸೊಬೊರೊನ್‌ಎಕ್ಸ್‌ಪೋರ್ಟ್’ ಕಂಪನಿಯು 2018ರ ಜುಲೈನಲ್ಲಿ ಅಂತಿಮ ಬ್ಯಾಚ್‌ನ ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು ಪೂರೈಕೆ ಮಾಡಿತು. 2019ರ ಏಪ್ರಿಲ್‌ನಲ್ಲಿ ಭಾರತೀಯ ವಾಯುಪಡೆಯು ಎಂಐ–17ವಿ5 ಹೆಲಿಕಾಪ್ಟರ್‌ಗಳ ದುರಸ್ಥಿ ಮತ್ತು ಪರಿಶೀಲನೆ ವ್ಯವಸ್ಥೆ ಸೌಲಭ್ಯವನ್ನು ಆರಂಭಿಸಿತು.
2019 ವಾಯುಪಡೆಯ ಆರು ಸಿಬ್ಬಂದಿ ಎಂಐ–17ವಿ5 ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿರುವಾಗ ಪತನವಾಗಿತ್ತು. ವಾಯು ಮಾರ್ಗದ ರಕ್ಷಣಾ ವ್ಯವಸ್ಥೆ ಸ್ಪೈಡರ್ ಕ್ಷಿಪಣಿ ವ್ಯವಸ್ಥೆಯು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತ್ತು.
ಭಾರತೀಯ ವಾಯುಪಡೆಯು ಪ್ರಸ್ತುತ 200 ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ.
ರಕ್ಷಣಾ ವ್ಯವಸ್ಥೆ ಹೀಗಿದೆ.
ಹೆಲಿಕಾಪ್ಟರ್‌ನ ಕಾಕ್‌ಪಿಟ್ ಮತ್ತು ಪ್ರಮುಖ ಸಾಧನಗಳಿಗೆ ಶಸ್ತ್ರಾಸ್ತ್ರಗಳಿಂದ ರಕ್ಷಣೆಗೆ ಕವಚದ ಸುರಕ್ಷತೆ ಇದೆ. ಮೆಷಿನ್ ಗನ್ ಸಹ ಹೆಲಿಕಾಪ್ಟರ್‌ಗೆ ಅಳವಡಿಸಲು ಅವಕಾಶವಿದೆ.ಇಂಧನ ಟ್ಯಾಂಕ್‌ಗಳಿಗೆ ಸ್ಫೋಟದಿಂದ ರಕ್ಷಣೆ ಪಡೆಯಲು ಪಾಲಿಯುರಿಥೇನ್ (polyurethane) ಫೋಮ್‌ನಿಂದ ಸೀಲ್ ಮಾಡಲಾಗಿದೆ.ಹೆಲಿಕಾಪ್ಟರ್‌ನಲ್ಲಿ ಸ್ಟೋಮ್- ವಿ (Shturm–v) ಕ್ಷಿಪಣಿಗಳು, ಎಸ್–8 ರಾಕೆಟ್‌ಗಳು, ಒಂದು 23ಎಂಎಂ ಮೆಷಿನ್ ಗನ್, ಪಿಕೆಟಿ ಮೆಷಿನ್ ಗನ್‌ಗಳು, ಎಕೆಎಂ ಸಬ್–ಮೆಷಿನ್ ಗನ್‌ಗಳನ್ನು ಅಳವಡಿಸಬಹುದು. ಗನ್‌ಗಳನ್ನು ಗುರಿಯಿಡಲು ಎಂಟು ಕಡೆ ವ್ಯವಸ್ಥೆ ಇದರಲ್ಲಿದೆ.