ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್.ಎನ್ ಶಟ್ಟಿ ನಿಧನ

1924

ಕಾರವಾರ :- ಮುರಡೇಶ್ವರ ನಿರ್ಮಾಣ ಕರ್ತು ಉದ್ಯಮಿ ಆರ್. ಎನ್ ಶಟ್ಟಿ (93) ಬೆಂಗಳೂರಿನಲ್ಲಿ ಹೃದಯಾಘಾತ ದಿಂದ ಇಂದು ಬೆಳಗಿನ ಜಾವ 3-30 ಕ್ಕೆ ನಿಧನ ಹೊಂದಿದ್ದಾರೆ.

1928 ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರಡೇಶ್ವರದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ್ಪ ಶಟ್ಟಿ ರವರು ಮರಡೇಶ್ವರ ದಲ್ಲಿ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಮುರಡೇಶ್ವರದ ಅಭಿವೃದ್ಧಿಗೆ ಕಾರಣರಾಗಿದ್ದರು.

ಮುರಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು 1967 ರಲ್ಲಿ ಆರ್‌ಎನ್ ಶಟ್ಟಿ ಆಂಡ್ ಕಂಪನಿ ಪ್ರಾರಂಭಿಸಿದ್ದು ಕಟ್ಟಡ ನಿರ್ಮಾಣ,ಹೋಟಲ್ ಉದ್ಯಮ,ವೈದ್ಯಕೀಯ ರಂಗ,ಶಿಕ್ಷಣ ಕ್ಷೇತ್ರ ಸಮಾಜ ಸೇವೆಯ ಮೂಲಕ ದೇಶ ವಿದೇಶ ದಲ್ಲಿ ಹೆಸರು ಮಾಡಿದ್ದಾರೆ. ಇವರ ಸೇವೆ ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ 2009-10 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೃತರ ಆತ್ಮಕ್ಕೆ ಶಾಂತಿ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ಟೀಟ್ ಮಾಡಿ ಶೋಕ ಸಂದೇಶ ತಿಳಿಸಿದ್ದಾರೆ.

ಮೃತರು ಮೂರು ಜನ ಗಂಡುಮಕ್ಕಳು,ನಾಲ್ಕು ಹೆಣ್ಣುಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಬೆಂಗಳೂರಿನ ಉತ್ತರಹಳ್ಳಿಯ ಅವರ ಕಾಲೇಜಿನ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!