ಉತ್ತರ ಕನ್ನಡ,ಶಿವಮೊಗ್ಗ ,ಉಡುಪಿ,ಮಂಗಳೂರು ಸೇರಿದಂತೆ ಹಲವು ಕಡೆ ಜ್ಯುವೆಲರ್ಸ್ ಗಳ ಮೇಲೆ IT ದಾಳಿ.

134

ಕನ್ನಡವಾಣಿ ಡೆಸ್ಕ್ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಆಭರಣ ಜ್ಯುವೆಲರ್ಸ್ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ನಡೆಸಿ ಪರಿಶೀಲನೆ ನಡೆಸುತಿದ್ದಾರೆ.12 ಜನ ತೆರಿಗೆ ಅಧಿಕಾರಿಗಳು ಬೆಳಗ್ಗೆಯೇ ಆಗಮಿಸಿದ್ದರೂ ಮಳಿಗೆ ತೆರೆಯದೇ ಸಿಬ್ಬಂದಿಗಳು ಬೇರೆಡೆ ತೆರಳಿದ್ದರು. ಕೆಲವು ಘಂಟೆಗಳ ಕಾಲ ಕಾದ ಅಧಿಕಾರಿಗಳು ಸಿಬ್ಬಂದಿಯನ್ನು ಕರೆಯಿಸಿ ಮಳಿಗೆ ತೆರೆಸಿ ಪರಿಶೀಲನೆ ನಡೆಸುತಿದ್ದು ಆಭರಣ ಮಾರಾಟ ,ಅದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಉಡುಪಿ ಮಂಗಳೂರಿನಲ್ಲಿ ಆಭರಣದ ಅಂಗಡಿಗೆ ಬಿಸಿ ಮುಟ್ಟಿಸಿದ ತೆರಿಗೆ ಅಧಿಕಾರಿಗಳು.

ಇನ್ನು ಮಂಗಳೂರಿನಲ್ಲೂ ಬೆಳ್ಳಂಬೆಳಗ್ಗೆ ಇಲ್ಲಿನ ವಿವಿಧ ಆಭರಣ ಮಳಿಗೆಗಳ (ಜ್ಯುವೆಲರಿ ಶಾಪ್) (Jewellery Shop) ಮೇಲೆ ಐಟಿ ಅಧಿಕಾರಿಗಳು (IT Raid) ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮಂಗಳೂರಿನ (Mangaluru) ಕದ್ರಿ ಬಳಿಯ ಶಿವಭಾಗ್‌ನ ಆಭರಣ ಮಳಿಗೆ ಮೇಲೆ ದಾಳಿ ನಡೆಸಿರುವ IT ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಐದಾರು ಮಂದಿ ಅಧಿಕಾರಿಗಳು ಬಿಲ್ಲಿಂಗ್ ವಿವರ, ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದಲ್ಲಿ ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಆಭರಣ ಜ್ಯುವೆಲ್ಲರಿ ಮಳಿಗೆಗಳಿರುವುದು ಕಂಡುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಹಾಗೂ ಕೊಟ್ಟಾರದಲ್ಲಿ ಆಭರಣ ಮಳಿಗೆಗಳಿವೆ. ಉಡುಪಿಯ (Udupi) ಹಲವಡೆ ಆಭರಣ ಜ್ಯುವೆಲ್ಲರಿ ಮಳಿಗೆಗಳಿರುವುದು ತಿಳಿದುಬಂದಿದೆ.

ಇದೇ ವೇಳೆ ಉಡುಪಿ, ಕಾರ್ಕಳ, ಕುಂದಾಪುರ, ಪುತ್ತೂರು, ಪಡುಬಿದ್ರಿ, ಹೆಬ್ರಿ ಬ್ರಹ್ಮಾವರ ಸೇರಿದಂತೆ ಹಲವೆಡೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.

ಶಿವಮೊಗ್ಗದಲ್ಲೂ ದಾಳಿ:-

ಶಿವಮೊಗ್ಗದಲ್ಲಿ (Shivamogga ) ಸಹ ತೆರಿಗೆ ಅಧಿಕಾರಿಗಳು ನಗರದ ಜೆಪಿಎನ್ ರಸ್ತೆಯಲ್ಲಿರುವ ಆಭರಣ(Abharana Jewellers) ಜ್ಯುವೆಲರ್ಸ್ ಮಳಿಗೆಗೆ ದಾಳಿ ನಡೆಸಿದ್ದಾರೆ.

ಎರಡು ಇನ್ನೋವಾ ಕಾರುಗಳಲ್ಲಿ ಬಂದಿರುವ 10 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು.ಆಭರಣ ಶೋ ರೂಂ ನಲ್ಲಿ ದಾಖಲೆ ಪರಿಶೀಲನೆ ನಡೆಸುತಿದ್ದು ಈ ಹಿನ್ನಲೆಯಲ್ಲಿ
ಮಳಿಗೆಗೆ ತಾತ್ಕಾಲಿಕವಾಗಿ ಗ್ರಾಹಕರಿಗೆ ನಿರ್ಬಂಧ ವಿಧಿಸಿ
ಪೊಲೀಸರಿಂದ ಬಂದೋಬಸ್ತ್ ಕಲ್ಪಿದಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!