ಬಳ್ಳಾರಿ: ಕಳೆದ ಹತ್ತು ವರ್ಷದಿಂದ ತಮ್ಮ ಸ್ವ ಕ್ಷೇತ್ರ ಬಳ್ಳಾರಿಗೆ ಆಗಮಿಸದ ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ ರವರು ಕೊನೆಗೂ ಬಳ್ಳಾರಿಗೆ ಶುಭ ಗಳಿಗೆಯಲ್ಲಿ ಕಾಲಿಟ್ಟಿದ್ದಾರೆ. ಎರಡು ತಿಂಗಳ ಮಟ್ಟಿಗೆ ಬಳ್ಳಾರಿಯಲ್ಲಿ ಇರಲು ಸುಪ್ರೀಂಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಿರಗುಪ್ಪ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದರು.
ಕುಟುಂಬ ಸಮೇತರಾಗಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿರೋದು ಇದು ಮೂರನೇ ಬಾರಿ. ಜನಾರ್ದನ ರೆಡ್ಡಿ ಆಗಮನ ಕುಟುಂಬ ಸದಸ್ಯರ ಸಂಭ್ರಮಕ್ಕೆ ಕಾರಣವಾಗಿದೆ. ಈ ಸಂಭ್ರಮದಲ್ಲಿ ಪುತ್ರಿ ಬ್ರಹ್ಮಿಣಿ, ಆಪ್ತ ಆಲಿಖಾನ್ ಕೂಡ ಪಾಲ್ಗೊಂಡಿದ್ದಾರೆ.



ಗಣಿ ಪ್ರಕರಣದ ಹಿಂದೆ.?
ಸದ್ಯ ಗಣಿ ಪ್ರಕರಣದಲ್ಲಿ ಪ್ರಮುಖ ಆರೋಪಿತರಾಗಿರುವ ಜನಾರ್ಧನ ರೆಡ್ಡಿಯವರಿಗೆ ಸಾಕ್ಷಾ ಕೊರತೆ ಬಂಧನದಿಂದ ಬಿಡುಗಡೆಯ ಭಾಗ್ಯ ದೊರೆಯುವ ಸಾಧ್ಯತೆಗಳು ಹೆಚ್ಚಿದೆ.
ಇನ್ನು ಈಗಾಗಲೇ ಈ ಪ್ರಕರಣದಲ್ಲಿ ಆರೋಪಿತರಾಗಿದ್ದ ಹಲವು ಅಧಿಕಾರಿಗಳು ಈಗಾಗಲೇ ಆರೋಪ ಮುಕ್ತರಾಗಿದ್ದಾರೆ. ಇನ್ನು ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದ್ದು ಒಂದುವೇಳೆ ಆರೋಪ ಮುಕ್ತರಾದಲ್ಲಿ ರಾಜ್ಯದಲ್ಲಿ ರಾಜಕೀಯ ಬದಲಾವಣೆಗೆ ಜನಾರ್ಧನ ರೆಡ್ಡಿಯವರು ಕಾರಣವಾಗುವ ಸಾಧ್ಯತೆಗಳು ಹೆಚ್ಚಿವೆ.
ಇಂದು ವರಮಹಾಲಕ್ಷ್ಮಿ ಹಬ್ಬದಂದು ಕುಟುಂಬದವರೊಂದಿಗೆ ಮೊದಲ ಬಾರಿ ಬಳ್ಳಾರಿಯಲ್ಲಿ ಸಮಯ ಕಳೆಯಲು ನಿರ್ಧರಿಸಿರುವ ಜನಾರ್ಧನ ರೆಡ್ಡಿಯವರು ಸದ್ಯ ಅಲ್ಲಿನ ಯಾರ ಸಂಪರ್ಕಕ್ಕೂ ಅಲಭ್ಯರಾಗಿದ್ದಾರೆ.