ಕಾರವಾರ:- ಅರಣ್ಯಾಧಿಕಾರಿಗಳೇ ನಿಯಮಗಳನ್ನು ಮೀರಿ ರಕ್ಷಿತಾರಣ್ಯದಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಹುಲಿ ಸಂರಕ್ಷಿತ ಪ್ರದೇಶವಾದ ಕುಳಗಿ-ಸಾತಖಂಡ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಬೃಹತ್ ಯಂತ್ರ ಬಳಸಿ ಅರಣ್ಯದಲ್ಲಿ ಜಂಗಲ್ ಸಫರಿಗೆ ರಸ್ತೆ ನಿರ್ಮಾಣ ಮಾಡುತಿದ್ದು ಇದಕ್ಕಾಗಿ ನೂರಕ್ಕೂ ಹೆಚ್ಚು ಮರಗಳನ್ನು ಕಡಿದು ಬೃಗತ್ ಯಂತ್ರಗಳನ್ನು ಬಳಸಿ ರಸ್ತೆ ನಿರ್ಮಿಸುತಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಕಾರ್ಯ ನಿರ್ವಿಘ್ನವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿಕೊಂಡು ಬಂದಿದ್ದಾರೆ. ಚಿಕ್ಕ ಕಾಲ ಹಾದಿಯಿದ್ದ ರಸ್ತೆಯನ್ನು ದೊಡ್ಡದಾಗಿ ಮಾಡಲು ರಕ್ಷಿತಾರಣ್ಯದಲ್ಲಿ ಮರಗಳನ್ನು ನಿಯಮ ಮೀರಿ ಧರೆಗುರಿಳಿಸಿದ್ದಾರೆ.

ಈ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು ರಸ್ತೆ ನಿರ್ಮಾಣ,ಮರಗಳನ್ನು ಕಡಿಯಲು ನಿಯಮದ ಪ್ರಕಾರ ಯಾವುದೇ ಅವಕಾಶ ಇರುವುದಿಲ್ಲ.ಆದ್ರೆ ಅರಣ್ಯ ರಕ್ಷಣೆ ಮಾಡಬೇಕಾದವರೇ ಅರಣ್ಯವನ್ನು ನಾಶ ಮಾಡುತಿದ್ದು ಪರಿಸರ ವಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರಿಸರವಾಧಿಗಳು ಆಗ್ರಹಿಸಿದ್ದಾರೆ.