ಉಳವಿ ಜಾತ್ರೆಯಲ್ಲಿ ಗೋವಾ ಮದ್ಯಮಾರಾಟ:ಮದ್ಯ ವಶ.

716

ಜೊಯಿಡಾ ತಾಲೂಕಿನ ಉಳವಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಗದ್ದೆ ಬಯಲಿನಲ್ಲಿ ಗೋವಾ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ,ಪೋಲಿಸರು ದಾಳಿ ನಡೆಸಿ ಗೋವಾ ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಗೋವಾ ಮದ್ಯ ಮಾರಾಟ ಮಾಡುತ್ತಿದ್ದ ಅರೋಪಿ ಉಳವಿಯ ದತ್ತಲಕ್ಷ್ಮಣ ದೇಸಾಯಿ ಪೋಲಿಸರ ದಾಳಿ ವೇಳೆ ಸರಾಯಿಯನ್ನು ಎಸೆದು ಜಾತ್ರೆಯ ಜನರ ಮದ್ಯೆ ತಪ್ಪಿಸಿಕೊಂಡಿದ್ದು, ಸುಮಾರು 7 ಲೀ. ಗೋವಾ ಮದ್ಯ ಅಂದಾಜು ಮೌಲ್ಯ 9000₹ ಪಂಚರ ಸಮ್ಮುಖದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ದಾಂಡೇಲಿ ಡಿ.ವೈ. ಎಸ್ ಪಿ ಕೆ.ಎಲ್ ಗಣೇಶ,ಸಿಪಿಐ ಬಾಬಾ ಸಾಹೇಬ ಹುಲ್ಲಣ್ಣನವರ ಮಾರ್ಗದರ್ಶದಲ್ಲಿ ಜೊಯಿಡಾ ಪಿ.ಎಸ್ .ಐ ಲಕ್ಷ್ಮಣ ಪುಜಾರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಜೊಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!