
ನವದೆಹಲಿ:- ದೇಶದಲ್ಲೇ ಅತೀ ಹೆಚ್ಚು ಕಲುಷಿತಗೊಂಡ ನದಿಗಳ ಪಟ್ಟಿಯಲ್ಲಿ ಕರ್ನಾಟಕದ 17 ನದಿಗಳು ಸೇರಿದ್ದು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ವರದಿ ಬಿಡುಗಡೆ ಗೊಳಿಸಿದೆ.
ಕರ್ನಾಟಕದ 17 ನದಿಗಳ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಸಹ ಸೇರ್ಪಡೆಗೊಂಡಿದೆ.
ಕರ್ನಾಟಕದ ಅರ್ಕಾವತಿ, ಲಕ್ಷ್ಮಣ ತೀರ್ಥ, ಮಲಪ್ರಭಾ, ತುಂಗಭದ್ರಾ, ಕಾವೇರಿ, ಭದ್ರಾ, ತುಂಗಾ, ಕಬಿನಿ, ಕಾಗಿನಾ, ಅಸಂಗಿ ನಾಲಾ, ಕಾಳಿ, ಕೃಷ್ಣ, ಶಿಂಷಾ, ಭೀಮಾ, ಕುಮಾರಧಾರ, ನೇತ್ರಾವತಿ ನದಿಗಳು ಸೇರಿವೆ.
ದೇಶದ 351 ನದಿಗಳಲ್ಲಿ 323 ಕಲುಷಿತವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿಯನ್ನು ರಾಜ್ಯ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಈ ವರದಿ ಪ್ರಕಟ ಮಾಡಲಾಗಿದೆ.
ವರದಿ ಪ್ರಕಾರ ನದಿಯು ಕೃಷಿ ತ್ಯಾಜ್ಯ, ತೆರೆದ ಮಲವಿಸರ್ಜನೆ, ಒಳಚರಂಡಿಯಿಂದ ಘನತ್ಯಾಜ್ಯ ಮತ್ತು ಕಾರ್ಖಾನೆಗಳ ಕಲುಷಿತ ನೀರುಗಳು ನದಿಗೆ ಸೇರುವುದರಿಂದ ಕಲುಷಿತ ಗೊಂಡಿದೆ ಎಂದು ಉಲ್ಲೇಕಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯು ಅತೀ ವಿಷಯುಕ್ತವಾಗಿದ್ದು ಈ ನೀರು ಕುಡಿಯಲು ಸಹ ಯೋಗ್ಯವಾಗಿಲ್ಲ ಎಂಬ ಮಾಹಿತಿ ಸಹ ಉಲ್ಲೇಕ ಮಾಡಲಾಗಿದೆ.