Astrology :ದಿನಭವಿಷ್ಯ october 18-2023

54

ಚಂದ್ರನು ಇಂದು ಧನಸ್ಸು ರಾಶಿಯಲ್ಲಿ ನೆಲಸಿದ್ದಾನೆ.ಹೀಗಾಗಿ ವೃಷಭ ,ಮಿಥುನ,ಕನ್ಯರಾಶಿಗೆ ಚಂದ್ರಬಲ ಇರಲಿದೆ. ಇನ್ನು ಸೂರ್ಯಗ್ರಹಣ ಗತಿಸಿ ಹೋದ ಪರಿಣಾಮ ವಾತಾವರಣದಲ್ಲಿ ದಿಢೀರ್ ಬದಲಾವಣೆ ಇರುವುದು. ಕರಾವಳಿ ಭಾಗದಲ್ಲಿ ಅಲ್ಲ ಮಳೆಯಾಗಲಿದೆ,ಮಲೆನಾಡು ಭಾಗದಲ್ಲೂ ಸಹ ಬೆಳೆಗೆ ತಂಪೆರೆಯಲಿದೆ.

ಇದನ್ನೂ ಓದಿ:-ಮುರುಡೇಶ್ವರ:ಹೆಂಡತಿ ಕತ್ತು ಸೀಳಿ ಹತ್ಯೆಮಾಡಿ ಹೋಟಲ್ ಗೆ ಹೋಗಿ ಕುಳಿತ ಗಂಡ!

ರಾಹುಕಾಲ : 12:08 ರಿಂದ 1:37
ಗುಳಿಕಕಾಲ : 10:39 ರಿಂದ 12:08
ಯಮಗಂಡಕಾಲ : 7:41 ರಿಂದ 9:10

ವಾರ:-ಬುಧವಾರ, ಚತುರ್ಥಿ ತಿಥಿ , ಅನುರಾಧ ನಕ್ಷತ್ರ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯಜ ಮಾಸ, ಶುಕ್ಲ ಪಕ್ಷ,

ಮೇಷ:ಮೋಸ ಹೋಗುವ ಸಾಧ್ಯತೆ, ಕುಟುಂಬ ಸೌಖ್ಯ, ಮಕ್ಕಳಿಂದ ಸಂತಸ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿಗಳು, ಧನ ಲಾಭ, ಸಂತಾನವೃದ್ಧಿ ಉತ್ತಮ ಶುಭ ಫಲ.ಅದೃಷ್ಟ ಸಂಖ್ಯೆ- 3

ವೃಷಭ: ಆರೋಗ್ಯ ಮಧ್ಯಮ,ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರದಲ್ಲಿ ಏರಿಳಿತ, ಮನೋವ್ಯಥೆ, ತಾಳ್ಮೆಯಿಂದಿರಿ, ಉದ್ಯಮಿಗಳಿಗೆ ಪ್ರಗತಿ, ಶತ್ರು ಭಾದೆ ನಿವಾರಣೆ.ಅದೃಷ್ಟ ಸಂಖ್ಯೆ- 2

ಮಿಥುನ:- ನೌಕರರಿಗೆ ಶುಭ, ಆರೋಗ್ಯ ಮಧ್ಯಮ,ನಾನಾ ಮೂಲಗಳಿಂದ ವರಮಾನ, ಮನಶಾಂತಿ, ರೋಗಭಾದೆ, ವಿದೇಶ ಯಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಷಯಗಳು ಇತ್ಯರ್ಥ.ಅದೃಷ್ಟ ಸಂಖ್ಯೆ- 9

ಕಟಕ: ಮೀನುಗಾರರಿಗೆ ಅಲ್ಪ ಲಾಭ ,ಮಿತ್ರರಿಂದ ಸಹಾಯ, ಅಲ್ಪ ಲಾಭ ಅಧಿಕ ಖರ್ಚು, ಕೃಷಿಕರಿಗೆ ಮಧ್ಯಮ,ಆರೋಗ್ಯ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಚೇತರಿಕೆ,ಮಿಶ್ರ ಫಲ,ಅದೃಷ್ಟ ಸಂಖ್ಯೆ- 2

ಸಿಂಹ: ರಾಜಕಾರಣಿಗಳಿಗೆ ಶುಭ,ವ್ಯಾಪಾರದಲ್ಲಿ ( business) ಲಾಭ,( profit) ಅರೋಗ್ಯ ಉತ್ತಮ, ಸ್ತ್ರೀಯರಿಗೆ ಶುಭ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ, ಸಂತೋಷ.

ಕನ್ಯಾ: ಆರೋಗ್ಯ ಮಧ್ಯಮ, ಕಲಾವಿಧರಿಗೆ ಹಣವ್ಯಯ,ಯತ್ನ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುವುದು, ಕೆಟ್ಟ ಆಲೋಚನೆಗಳಿಂದ ಕಾರ್ಯ ವಿಘ್ನ, ಸುಖ ಭೋಜನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ ದಿಂದ ಕರ್ಚು ಅಧಿಕ‌.ಅದೃಷ್ಟ ಸಂಖ್ಯೆ- 1

ತುಲಾ:ವ್ಯಾಪಾರಿಗಳಿಗೆ ಶುಭ,ಹೋಟಲ್ ಉದ್ಯಮಗಳಿಗೆ ಲಾಭ, ಯತ್ನ ಕಾರ್ಯ ಸಿದ್ದಿ, ಬಂಧು ಮಿತ್ರರ ಸಹಾಯ, ಸ್ಥಳ ಬದಲಾವಣೆ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧ ವ್ಯವಹಾರಗಳಿಂದ ಲಾಭ,ಅದೃಷ್ಟ ಸಂಖ್ಯೆ- 3

ವೃಶ್ಚಿಕ:ಆರೋಗ್ಯ ಉತ್ತಮ, ಮಾಡುವ ಕೆಲಸದಲ್ಲಿ ಪ್ರಗತಿ, ಕುಟುಂಬ ಸೌಖ್ಯ, ಧನ ನಷ್ಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ,ಅದೃಷ್ಟ ಸಂಖ್ಯೆ- 5

ಧನಸ್ಸು: ಯತ್ನ ಕಾರ್ಯ ಸುದ್ದಿ, ನಾನಾ ರೀತಿ ಆದಾಯ ಪ್ರಾಪ್ತಿ, ಶತ್ರುನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಅನ್ಯೂನ್ಯತೆ,ಆಕಸ್ಮಿಕ ಧನ ಲಾಭ, ಪುಣ್ಯಕ್ಷೇತ್ರ ದರ್ಶನ.ಅದೃಷ್ಟ ಸಂಖ್ಯೆ- 2

ಮಕರ: ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಧಿಕಕರ್ಚು,ಅಧಿಕಾರಿಗಳಿಂದ ತೊಂದರೆ, ದುಂದುವೆಚ್ಚ,ಕೃಷಿಕರಿಗೆ ನಷ್ಟ,ಅದೃಷ್ಟ ಸಂಖ್ಯೆ- 2

ಕುಂಭ: ಹೋಟಲ್ ಉದ್ಯಮಿಗಳಿಗೆ ಲಾಭ,ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣ ಭಾದೆ, ಆರೋಗ್ಯದಲ್ಲಿ ಏರುಪೇರು.ಅದೃಷ್ಟ ಸಂಖ್ಯೆ- 9

ಮೀನ: ಆರೋಗ್ಯ ಉತ್ತಮ, ಕುಟುಂಬದಲ್ಲಿ ವಿಘ್ನ,ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಚಂಚಲ ಮನಸ್ಸು, ಸಾಲಭಾದೆ, ಅಕಾಲ ಭೋಜನ, ವಿಪರೀತ ವ್ಯಸನ, ವಾದ ವಾದದಲ್ಲಿ ಗೆಲುವು. ಅದೃಷ್ಟ ಸಂಖ್ಯೆ- 6
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!