KGF ನಟಿಯ ಹಾಟ್ ಲುಕ್ ಗೆ ನೆಟ್ಟಿಗರು ಫಿದಾ:ನನ್ನ ಪ್ರಯತ್ನ ವ್ಯರ್ಥ ಮಾಡಬೇಡಿ ಅಂದ್ಲು ನಟಿ!

191

ಬೆಂಗಳೂರು :- ಕೆಜಿಎಫ್’ (KGF) ಚಿತ್ರದ ಮೂಲಕ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರೂಪಾ ರಾಯಪ್ಪ (Roopa Rayappa) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಹವಾ ಕ್ರಿಯೆಟ್ ಮಾಡುತ್ತಲೇ ಇರುತ್ತಾರೆ.

ಈಗ ಮತ್ತೆ ಹೊಸ ಫೋಟೋಶೂಟ್ ಮೂಲಕ ಪಡ್ಡೆಗಳ ಹೃದಯಕ್ಕೆ ಬೆಂಕಿ ಹಚ್ಚಿದ್ದಾರೆ. ಒಳ ಉಡುಪಿನ ಹಸಿ ಬಿಸಿ ಫೋಟೋ ಶೇರ್ ಮಾಡುವ ಮೂಲಕ ರೂಪಾ ತನ್ನದೇನೂ ಕಮ್ಮಿಇಲ್ಲ ಎನ್ನುವ ಮೂಲಕ ತನ್ನ ಒಳ ಸೌಂದರ್ಯ ಹೊರಹಾಕಿದ್ದಾರೆ.

ನೀಲಿ ಬಣ್ಣದ ಒಳ ಉಡುಪಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಇವರ ಅಂದ ಚಂದ ಸಖತ್ ಹಾಟ್ ಲುಕ್ ಹುಡುಗರ ಕಣ್ಣು ಕೆಂಪಾಗಿಸಿದೆ.

ಸಿನಿಮಾಗಿಂತ ಹಾಟ್ ಫೋಟೋಗಳ ಮೂಲಕವೇ ಹಲ್‌ಚಲ್ ಎಬ್ಬಿಸಿರುವ ರೂಪಾ, ಕಳೆದ ಬಾರಿ ವಿವಿಧ ಭಂಗಿಗಳ ಫೋಟೋ ಹಂಚಿಕೊಂಡು ಹುಡುಗರ ನಿದ್ದೆ ಕೆಡಸಿದ್ದಳು.

ತಾನ್ನ ಹಾಟ್ ಫೋಟೊ (Hot photos) ನೋಡಿ ಕಾಲೆಳೆದು ಜೊಲ್ಲು ಸುರಿಸಿದವರಿಗೆ ರೂಪ ಉತ್ತರ ನೀಡಿದ್ದು ,ನಾನು ಅಪ್ಲೋಡ್ ಮಾಡಿರುವ ಫೋಟೋಸ್‌ ಒಂದು ಪ್ರೊಫೆಷನಲ್ ಎನ್ವೀರಾಂನ್ಮೆಂಟ್‌ನಲ್ಲಿ ಮಾಡೆಲಿಂಗ್‌ಗಾಗಿ ತೆಗೆದಿದ್ದು, (modelling) ಅವುಗಳನ್ನ ಅಪಹಾಸ್ಯ ಮಾಡಿ ನಮ್ಮ ಪ್ರಯತ್ನಗಳು ವ್ಯರ್ಥವೆಂದು ಅನಿಸುವಂತೆ ಮಾಡಬೇಡಿ.

ಕೆಟ್ಟದಾಗಿ ಕಾಮೆಂಟ್ ಹಾಕುವುದಕ್ಕೆ ಒಂದು ನಿಮಿಷ ಸಾಕು. ನಮಗೆ ಅವುಗಳ ಪರಿಣಾಮದಿಂದ ಹೊರಬರಲು ಹೆಚ್ಚು ಸಮಯ ಬೇಕು. ಆದ್ದರಿಂದ ದಯವಿಟ್ಟು ಕಲೆಯ ಕೆಲಸವನ್ನು ಗೌರವಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ರೂಪಾ ರಾಯಪ್ಪ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ( social media account) ಮನವಿ ಮಾಡಿದ್ದಾರೆ.

ರೂಪಾ ರಾಯಪ್ಪ ಅವರು ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ಸದ್ಯ ‘ದಿ ಜಡ್ಜ್‌ಮೆಂಟ್‌’ ಎಂಬ ಸಿನಿಮಾದಲ್ಲಿ ರವಿಚಂದ್ರನ್, ಧನ್ಯಾ ರಾಮ್‌ಕುಮಾರ್ ಮತ್ತು ದಿಗಂತ್ ಜೊತೆ ರೂಪಾ ರಾಯಪ್ಪ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆಕೆ ಜೊತೆ ‘ಕಾಡ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

“ಎಲ್ರ ಕಾಲೆಳೆಯುತ್ತೆ ಕಾಲ” ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಜೊತೆ ರೂಪಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶ್ವೇತಾ ಶ್ರೀವಾತ್ಸವ್ ಜೊತೆ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಹಿಂದಿ ವೆಬ್ ಸಿರೀಸ್‌ವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗಕ್ಕೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ.

ಯಶ್ (Yash) ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಈಗ ಲಕ್ ಬದಲಾಗಿದೆ. ಒಳ್ಳೆಯ ಪಾತ್ರಗಳು ಅವರನ್ನ ಅರಸಿ ಬರುತ್ತಿವೆ.ಇನ್ನು ರೂಪ ಕೂಡ ಬಿಗ್ ಬಾಸ್ ಮನೆಗೆ ಸ್ಪರ್ದಿಯಾಗಿ ಬರುತ್ತಾರೆ ಎಂಬ ಗುಸು ಗುಸು ಎದ್ದಿದೆ.
ಅಕ್ಟೋಬರ್ 8ಕ್ಕೆ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 10ಕ್ಕೆ ( Bigg Boss season 10) ಅದ್ದೂರಿ ಚಾಲನೆ ಸಿಗಲಿದ್ದು ಈ ಹಾಟ್ ನಟಿ ಹಾಟ್ ಆಗಿ ಎಂಟ್ರಿ ಕಿಡ್ತಾರ ಎಂಬುದನ್ನ ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!