BREAKING NEWS
Search

ಸೋಮವಾರ ದಿನ ಭವಿಷ್ಯ- 16-08-2021

643

ವಾರ-ಸೋಮವಾರ, ಅಷ್ಟಮಿ, ಅನುರಾಧ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ,

ರಾಹುಕಾಲ – 7:45 ರಿಂದ 9:19
ಗುಳಿಕಕಾಲ – 2:01 ರಿಂದ 3:35
ಯಮಗಂಡಕಾಲ – 10:53 ರಿಂದ 12:27

ಹವಾಮಾನ ಫಲ

ಇಂದು ಮಳೆ ಮುಂದುವರೆಯಲಿದ್ದು ,ಕೆಲವುವಕಡೆ ಮೋಡ ಕವಿದ ವಾತಾವರಣ ಇರಲಿದೆ.ಬಯಲುವಸೀಮೆಯಲ್ಲಿ ಶುಷ್ಕ ವಾತಾವರಣ ಇರಲಿದ್ದು ಕೆಲವು ಕಡೆ ರಾತ್ರಿ ವೇಳೆ ಚಳಿ ಪ್ರಾರಂಭವಾಗಲಿದೆ.

ಉದ್ಯೋಗ ಫಲ.

ಸರ್ಕಾರಿ ಉದ್ಯೋಗಿಗಳಿಗೆ ಒತ್ತಡ ಹೆಚ್ಚು, ವ್ಯಾಪಾರಿಗಳಿಗೆ ಮಧ್ಯಮ ಲಾಭ, ಹೋಟಲ್ ಉದ್ಯಮ,ಮೀನುಗಾರಿಕೆ ರಂಗದಲ್ಲಿ ಚೇತರಿಕೆ, ಕೃಷಿಯ ಉದ್ಯಮ ಲಾಭ ಇರಲಿದೆ‌. ಎಲಕ್ಟ್ರಾನಿಕ್ಸ್ ,ವಾಹನ ಉದ್ಯಮದವರಿಗೆ ಲಾಭ ಹೆಚ್ಚಿರಲಿದೆ‌.

ಮೇಷ: ಹೊಸ ಕೆಲಸಕ್ಕೆ ಹಿನ್ನಡೆ,ಆದಾಯಕ್ಕಿಂತ ಖರ್ಚು ಜಾಸ್ತಿ, ಶತ್ರು ಭಾದೆ,ಕೆಟ್ಟ ಮಾತು, ಕೆಲಸ ಕಾರ್ಯಗಳಲ್ಲಿ ವಿಘ್ನ, ನಿಂದನೆ ಅಪವಾದ.

ವೃಷಭ:ಆರೋಗ್ಯ ಮಧ್ಯಮ, ಸ್ಥಳ ಬದಲಾವಣೆ, ಅನಾರೋಗ್ಯ, ಹಣದ ತೊಂದರೆ, ನೀಚ ಜನರ ಸಹವಾಸ, ಕೋರ್ಟ್ ಕೆಲಸಗಳಲ್ಲಿ ವಿಘ್ನ.

ಮಿಥುನ: ಈ ದಿನ ಮಿಶ್ರ ಫಲ,ಋಣಭಾದೆ, ಬಂಧು ಮಿತ್ರರಲ್ಲಿ ಕಲಹ, ವ್ಯಾಪಾರದಲ್ಲಿ ಲಾಭ, ದ್ರವ್ಯ ಲಾಭ, ಮನಃಶಾಂತಿ,ಸಜ್ಜನ ವಿರೋಧ.

ಕಟಕ: ಹೊಸ ಕೆಲಸದಲ್ಲಿ ಹಿನ್ನಡೆ, ತಾಂತ್ರಿಕ ಕೆಲಸಗಾರರಿಗೆ ಲಾಭ, ಯಂತ್ರ ಕರೀದಿ, ಸ್ತ್ರೀ ಲಾಭ, ಮನೆಯಲ್ಲಿ ಮಂಗಳ ಕಾರ್ಯ, ಬ್ರಾತೃಗಳಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ.

ಸಿಂಹ: ರಾಜಕಾರಣಿಗಳಿಗೆ ಹಣ ಉಳಿಯದು,ಅಧಿಕ ಧನವ್ಯಯ, ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರಿಗಳಿಗೆ ಕಾರ್ಯ ಹಾನಿ, ಲಾಭ ಸಿಗದು,ಅಧಿಕ ಕರ್ಚು.

ಕನ್ಯಾ: ಹಣ ಅಧಿಕ ಕರ್ಚು, ಅಧಿಕ ತಿರುಗಾಟ,ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ, ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ, ವ್ಯಾಪಾರದಲ್ಲಿ ಧನಲಾಭ, ಉತ್ತಮ ಬುದ್ಧಿಶಕ್ತಿ ಯಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಿರಿ.

ತುಲಾ: ಈ ದಿನ ಅಷ್ಟು ಲಾಭದಾಯಕವಾಗಿಲ್ಲ, ಮನೋವ್ಯಥೆ, ದೇಹಾಲಾಸ್ಯ, ಪುತ್ರ ದ್ವೇಷ, ಮನಕ್ಲೇಷ, ಸಾಲ ಮರುಪಾವತಿ ಗೆ ಯತ್ನ, ಹಣದ ಕರ್ಚು ಅಧಿಕ, ಎಲಕ್ಟ್ರಾನಿಕ್ ,ವಾಹನ ತಯಾರಿಕರಿಗೆ ಲಾಭ.

ವೃಶ್ಚಿಕ: ವಾಸ ಗೃಹದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧುಗಳಲ್ಲಿ ಕಲಹ, ಹಿತಶತ್ರುಗಳಿಂದ ತೊಂದರೆ.

ಧನಸ್ಸು: ಮನಸ್ಸಿಗೆ ಅಶಾಂತಿ, ಅಧಿಕ ಖರ್ಚು, ಮನಸ್ತಾಪ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ.

ಮಕರ: ಅರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳ ಖರೀದಿ, ದಾಂಪತ್ಯ ಕಲಹ, ಬಂಧು ಮಿತ್ರರಿಂದ ಸಹಾಯ.

ಕುಂಭ: ಮನಸಿನಲ್ಲಿ ಭಯ, ವಾಹನ ಅಪಘಾತ, ಕೋರ್ಟ್ ವ್ಯಾಜಗಳಿಂದ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ.

ಮೀನ: ಆಕಸ್ಮಿಕ ಧನಲಾಭ, ವೃಥಾ ಅಲೆದಾಟ, ಅಲ್ಪ ಕಾರ್ಯಸಿದ್ದಿ, ವಾದದಿಂದ ಮನಸ್ತಾಪ, ಹಿತ ಶತ್ರುಗಳಿಂದ ತೊಂದರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!