BREAKING NEWS
Search

Uttrakannada: ಅಂಗನವಾಡಿ ಕಾರ್ಯಕರ್ತರಿಗೆ ಹರಿದ ಸೀರೆಯೇ ಗತಿ! ಸೀರೆಗೆ ಹಣ ನೀಡುವುದರಲ್ಲೂ ನಿರ್ಲಕ್ಷ ತೋರಿದ ಕೇಂದ್ರಸರ್ಕಾರ!

134

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿ ಯಿಂದ ಕಾರವಾರದ ವರೆಗೆ ಪಾದಯಾತ್ರೆ ನವಂಬರ-2 ರಿಂದ 9ಭಾಗಿಯಾಗಿ, ವಿವರ ಈ ಕೆಳಗಿನಂತಿದೆ:-

ಕಾರವಾರ :- ರಾಜ್ಯಾದ 225 ತಾಲೂಕಿನಲ್ಲೂ ಅಂಗನವಾಡಿ ಕಾರ್ಯಕರ್ತರು ಕಡಿಮೆ ವೇತನದಲ್ಲಿ ಹೆಚ್ಚಿನ ಕೆಲಸ ಮಾಡುತಿದ್ದಾರೆ. ಪ್ರತಿ ಅಂಗನವಾಡಿಯಲ್ಲಿ ಓರ್ವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ನೇಮಕ ಮಾಡಲಾಗಿದೆ. ಆದ್ರೆ ಅಂಗನವಾಡಿ (Anganawadi)ಕಾರ್ಯಕರ್ತರ ಸ್ಥಿತಿ ಮಾತ್ರ ಈವರೆಗೂ ಸುದಾರಿಸದೇ ತಮ್ಮ ಸ್ಪಂತ ಹಣ ಕರ್ಚುಮಾಡಿ ಕೆಲಸ ಮಾಡುವಂತಾಗಿದೆ.

ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಕೇಂದ್ರ ಸರ್ಕಾರದ ಪತ್ರದ ಸಂ: 11-36/2016 ಸಿಡಿ-1 ದಿನಾಂಕ: 23-11-2017ರಂತೆ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ರೂ. 800/- ಮೊತ್ತದ ಒಂದು ವರ್ಷಕ್ಕೆ 2 ಸೀರೆಗಳ್ನು ಒದಗಿಸಬೇಕಾಗಿರುತ್ತದೆ. ಆದ್ರೆ ರಾಜ್ಯಾಧ್ಯಾಂತ ಒಂದೂವರೆ ವರ್ಷದಿಂದ ಸೀರೆಗೆ ನೀಡಬೇಕಾದ ಹಣವನ್ನು ಕೇಂದ್ರಸರ್ಕಾರ ನೀಡಿಲ್ಲ. ಇದಲ್ಲದೇ ಯೋಜನೆಯ (projact)ಹಣ ಸಹ ಬರಬೇಕಿದ್ದು ಇವೆಲ್ಲವಕ್ಕೂ ಕತ್ತರಿ ಹಾಕಿದೆ.

ಉತ್ತರ ಕನ್ನಡ ಜಿಲ್ಲೆಯ ವಿಷಯಕ್ಕೆ ಬರುವುದಾದರೇ ಜಿಲ್ಲೆಯಲ್ಲಿ 2600 ಅಂಗನವಾಡಿ ಕಾರ್ಯಕರ್ತರು,2600 ಅಂಗನವಾಡಿ ಸಹಾಯಕರು ಕಾರ್ಯನಿರ್ವಹಿಸುತಿದ್ದಾರೆ. ಇವರಿಗೆಗೆ ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಸರ್ಕಾರದಿಂದ(central government) ಸೀರೆಗೆ ಬರಬೇಕಾದ 800 ಸಹಾಯದನ ಬಂದಿಲ್ಲ.

ಇನ್ನು ಪ್ರತಿ ದಿನ ಸಮವಸ್ತ್ರ ಧರಿಸಬೇಕು ( uniform) ಎಂಬ ನಿಯಮ ವಿದಿ.ಹೀಗಾಗಿ ಹಿಂದೆ ನೀಡಿದ ಸೀರಯನ್ನು ಉಟ್ಟ ಅಂಗನವಾಡಿ ಕಾರ್ಯಕರ್ತರಲ್ಲಿ ಬಹುತೇಕ ಹರಿದ ,ಲಡ್ಡಾದ ಸೀರೆಗಳಾಗಿವೆ. ಇನ್ನು ಅಧಿಕಾರಿಗಳು ಸಹ ಸಮವಸ್ತ್ರ ಹಾಕದೇ ಇದ್ದರೇ ಮೆಮೋ ನೀಡುವ ಮತ್ತು ಎಚ್ಚರಿಕೆ ನೀಡುವ ಕೆಲಸ ಮಾಡುತಿದ್ದಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರಿಗೆ ಇದೀಗ ಹರಿದ ಹಾಳಾದ ಸೀರೆಯನ್ನೇ ಉಡುವ ಸ್ಥಿತಿ ಉದ್ಭವವಾಗಿದೆ. ಇನ್ನು ಪ್ರತಿ ತಾಲೂಕಿನಲ್ಲೂ ಒಂದೊಂದು ಬಣ್ಣದ ಸಮವಸ್ತ್ರ ನಿಗದಿ ಮಾಡಲಾಗಿದೆ.

ಎಲ್ಲರಿಗೂ ಒಂದೇ ಬಣ್ಣದ ಉತ್ತಮ ಗುಣಮಟ್ಟದ ಸಮವಸ್ತ್ರ ನೀಡಬಹುದು.ಆದರೇ ಇದು ಆಗುತ್ತಿಲ್ಲ.ಇನ್ನು ಈ ಹಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿ ಕಾರ್ಯಕರ್ತರ ಖಾತೆಗೆ ಬರಬೇಕು .ಹೀಗಿರುವಾಗ ಹಣ ಬರುವುದರಲ್ಲೂ ವಿಳಂಬವಾಗುತಿದ್ದು ಕತ್ತರಿ ಕೈಯಲ್ಲಿ ಹಿಡಿದುಕೊಂಡಿರು ಕೇಂದ್ರಕ್ಕೂ ಭ್ಯಾಗ್ಯಗಳನ್ನೇ ಕೊಡುತ್ತೊರುವ ರಾಜ್ಯಸರ್ಕಾರಕ್ಕೆ (state government )ಅಂಗನವಾಡಿ ಕಾರ್ಯಕರ್ತರ ಶ್ರಮ ಮಾತ್ರ ಬೇಕಾಗಿದ್ದು ಅವರ ಅಗತ್ಯ ಮಾತ್ರ ಬೇಡದಂತಾಗಿದೆ. ಇನ್ನಾದರೂ ಇವರ ಕಷ್ಟ ಆಲಿಸಿ ಇವರಿಗೆ ಸಿಗಬೇಕಾದ ಸವಲತ್ತು ನೀಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!