ಗೋವಾದ ಅರಬ್ಬಿ ಸಮುದ್ರದಲ್ಲಿ ಮಲ್ಪೆಯ ಎರಡು ಬೋಟ್ ಮುಳುಗಡೆ-ಏಳು ಜನ ಮೀನುಗಾರರ ರಕ್ಷಣೆ

1546

ಕಾರವಾರ ‘- ಹವಾಮಾನ ವೈಪರಿತ್ಯ ದಿಂದ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಎರಡು ಬೋಟು ಗಳು ಮುಳುಗಡೆಯಾದ ಘಟನೆ ಗೋವಾ ದ ಪಣಜಿ ಬಳಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಮಲ್ಪೆಯಿಂದ ಗೋವಾ ದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟ್ ಗಳು ಅಲೆಗಳ ಅಬ್ಬರಕ್ಕೆ ಸಿಲುಕಿದ್ದು ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ. ಮರದ ಬೋಟ್ ಆದ್ದರಿಂದ ಮಾತಾ ಜಟಗೇಶ್ವರ , ಪಲ್ಲಕ್ , ಹೆಸರಿನ ಬೋಟ್ ಮುಳುಗಡೆಯಾಗಿದ್ದು
ಮುಳುಗಡೆಯಾದ ಎರಡು ಬೋಟ್ ನಲ್ಲಿ ಇದ್ದ ಏಳು ಜನರನ್ನು ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್ ಗಾರ್ಡ ಪೊಲೀಸರಿಂದ ರಕ್ಷಣೆ ಮಾಡಿ ವಾಸ್ಕೋ ಗೆ ಕರೆತಂದಿದ್ದಾರೆ‌ .ಕಡಲಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು ಇದನ್ನೂ ಸಹ ರಕ್ಷಣೆ ಮಾಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!