ಬೆಂಗಳೂರು:- ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕೇಂದ್ರದ ನೆರೆಹಾನಿ ಅಧ್ಯಯನ ತಂಡ ಭೇಟಿ ನೀಡಲಿದೆ.
ಸೆ.5 ಮತ್ತು ಸೆ.6 ರಂದು ಎರಡು ದಿನಗಳ ನೆರೆ ಪೀಡಿತ ಪ್ರದೇಶಗಳ ಅಧ್ಯಯನ ಮಾಡಲಿದೆ.
ನೆರೆ ಅಧ್ಯಯನಕ್ಕೆ ರಾಜ್ಯಕ್ಕೆ ಏಳು ಜನ ಕೇಂದ್ರದ ಅಧಿಕಾರಿಗಳ ನಿಯೋಗ ಬರಲಿದೆ.ಸೆಪ್ಟೆಂಬರ್ 5 ಮತ್ತು 6 ನೇ ತಾರೀಕಿನಂದು ಒಟ್ಟು ಎರಡು ದಿನ ರಾಜ್ಯ ಪ್ರವಾಸ ಮಾಡಲಿದೆ.
ಮಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಲಿರುವ ಏಳು ಜನರ ಮೂರು ತಂಡಗಳು ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ಮಾಡಲಿದೆ.
ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಒಂದು ತಂಡ ಭೇಟಿ ನೀಡಿ ಅಧ್ಯಯನ ಮಾಡಲಿದೆ.
ಧಾರವಾಡ ಮತ್ತು ಬಾಗಲಕೋಟೆ ಗೆ ಒಂದು ತಂಡ
ಬೆಳಗಾವಿಗೆ ಒಂದು ತಂಡ ಪ್ರತ್ಯೇಕವಾಗಿ ಭೇಟಿ ಮಾಡಲಿದೆ.
ರಾಜ್ಯದಲ್ಲಿ ಈವರೆಗೆ ಮಳೆಯಿಂದ ಒಟ್ಟು ₹5690 ಕೋಟಿ ಹಾನಿಯಾಗಿದೆ.
ಕೇಂದ್ರ ತಂಡಗಳ ಅಧ್ಯಯನದ ವೇಳಾಪಟ್ಟಿ ಈ ಕೆಳಗಿನಂತಿದೆ.

